
ಸ್ಟಾವೆಂಜರ್: ನಾರ್ವೆ ಚೆಸ್ 2025 ಟೂರ್ನಿಯಲ್ಲಿ ಹಾಲಿ ವಿಶ್ವ ಚಾಂಪಿಯನ್ ಭಾರತದ ಡಿ.ಗುಕೇಶ್ ಅವರು ವಿಶ್ವದ ಅಗ್ರ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರ ವಿರುದ್ಧ ಗೆಲುವು ಸಾಧಿಸಿದ್ದು, ಈ ಅನಿರೀಕ್ಷಿತ ಸೋಲಿನ ಬೆನ್ನಲ್ಲೇ ಆಕ್ರೋಶಗೊಂಡ ಕಾರ್ಲ್ ಸನ್ ಚೆಸ್ ಕುರ್ಚಿ ಮೇಲೆ ಗುದ್ದಿ ಆಕ್ರೋಶ ವ್ಯಕ್ತಪಡಿಸಿದ್ದರು.
Norway Chess 2025ಯ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಸೋಲಿನ ಅಂಚಿನಲ್ಲಿದ್ದ ಗುಕೇಶ್ ಅಂತಿಮ ಕ್ಷಣದಲ್ಲಿ ತಮ್ಮ ಚತುರ ನಡೆಯಿಂದ ಕಾರ್ಲ್ ಸನ್ ಗಮನ ಬೇರೆಡೆ ಸೆಳೆದು ತಾವು ಸೋಲನ್ನು ಗೆಲುವಾಗಿ ಮಾರ್ಪಡಿಸಿದರು.
ಆದರೆ ಗೆಲ್ಲಬಹುದಾಗಿದ್ದ ಪಂದ್ಯವನ್ನು ತಮ್ಮ ಅಂತಿಮ ಹಂತದ ಕೆಟ್ಟ ನಡೆಯಿಂದ ಸೋತ ಕಾರ್ಲ್ ಸನ್ ಅಲ್ಲಿಯೇ ತಮ್ಮ ಆಕ್ರೋಶ ಹೊರಹಾಕಿದರು. ಚೆಸ್ ಬೋರ್ಡ್ ಟೇಬಲ್ ಅನ್ನು ಆಕ್ರೋಶದಿಂದ ಗುದ್ದಿದ ಕಾರ್ಲ್ ಸನ್ ಬಳಿಕ ಗುಕೇಶ್ ರನ್ನು ಉದ್ದೇಶಿಸಿ ಕ್ಷಮೆ ಕೇಳುತ್ತಾರೆ. ಕೆಲವೇ ಕ್ಷಣಗಳಲ್ಲಿ ಗುಕೇಶ್ ಬಳಿ ಮರಳಿದ ಕಾರ್ಲ್‌ಸನ್, ಅವರ ಬೆನ್ನು ತಟ್ಟಿದರು.
ಆದರೆ ಈ ಅನಿರೀಕ್ಷಿತ ಗೆಲುವಿನಿಂದ ಅಚ್ಚರಿಗೊಂಡ ಗುಕೇಶ್ ಗೆಲುವಿನ ಬಳಿಕವೂ ಅಚ್ಚರಿಯಲ್ಲಿದ್ದರು. ಈ ಪಂದ್ಯದ ಗೆಲುವಿನೊಂದಿಗೆ 19ರ ಹರೆಯದ ಗುಕೇಶ್ 8.5 ಅಂಕಗಳನ್ನು ಕಲೆ ಹಾಕಿದ್ದು, ಮೂರನೇ ಸ್ಥಾನಕ್ಕೇರಿದ್ದಾರೆ. ಈ ಎಲ್ಲ ಘಟನೆಗಳ ನಡುವೆ ಅಂತಿಮ ಸಂಯಮವನ್ನು ಕಾಪಾಡಿಕೊಂಡ ಗುಕೇಶ್, ಚೆಸ್ ಲೋಕದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಂತೆಯೇ ಇದು ಕ್ಲಾಸಿಕಲ್ ಗೇಮ್‌ನಲ್ಲಿ ಕಾರ್ಲ್‌ಸನ್ ವಿರುದ್ಧ ಗುಕೇಶ್ ದಾಖಲಿಸಿದ ಮೊದಲ ಜಯವಾಗಿದೆ.
ಅದೃಷ್ಟ ಸಾಥ್ ಕೊಟ್ಟಿತು: ಗುಕೇಶ್
ಇನ್ನು ಈ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ಗುಕೇಶ್, 'ಕಾರ್ಲ್‌ಸನ್ ವಿರುದ್ಧದ ಪಂದ್ಯದಲ್ಲಿ ಅದೃಷ್ಟ ಸಾಥ್ ಕೊಟ್ಟಿತು ಎಂದು ಹೇಳಿದ್ದಾರೆ. 'ನಾನು ಹೆಚ್ಚೇನು ಮಾಡುವಂತಿರಲಿಲ್ಲ. ಸೋಲಿನ ಅಂಚಿನಲ್ಲಿದ್ದೆ. 100ರಲ್ಲಿ 99 ಸಲ ಸೋಲಬಹುದಿತ್ತು. ಆದರೂ ಕಾರ್ಲ್‌ಸನ್ ಗೆಲುವನ್ನು ಕಷ್ಟಕರವಾಗಿಸಲು ಪ್ರಯತ್ನಿಸಿದ್ದೆ. ಅಂತಿಮವಾಗಿ ಅದೃಷ್ಟ ನನ್ನ ಪಾಲಾಯಿತು' ಎಂದು ಹೇಳಿದ್ದಾರೆ.
ಕಾರ್ಲ್ ಸನ್ ಆಕ್ರೋಶ ಕ್ರೀಡಾ ರೀತಿಯಲ್ಲಿ ಸ್ವೀಕರಿಸುತ್ತೇನೆ
ಇದೇ ವೇಳೆ ಕಾರ್ಲ್ ಸನ್ ಆಕ್ರೋಶದ ಕುರಿತು ಮಾತನಾಡಿದ ಗುಕೇಶ್, 'ಅದು ನಾನು ಬಯಸಿದ ರೀತಿಯಲ್ಲಿ ಇರಲಿಲ್ಲ, ಆದರೆ ಸರಿ, ನಾನು ಅದನ್ನು ಸ್ವೀಕರಿಸುತ್ತೇನೆ. ಕ್ರೀಡಾ ರೀತಿಯಲ್ಲಿ ಸ್ವೀಕರಿಸುತ್ತೇನೆ. ಅವರ ಹತಾಶೆ ಅರ್ಥವಾಗುತ್ತದೆ. ನಾನು ನನ್ನ ವೃತ್ತಿಜೀವನದಲ್ಲಿ ಬಹಳಷ್ಟು ಟೇಬಲ್‌ಗಳನ್ನು ಆಡಿದ್ದೇನೆ ಎಂದು ಹೇಳಿದರು.
ಎಲ್ಲಿ ಎಡವಿದ್ದೇನೆ ಎಂದು ಗೊತ್ತಾಗುತ್ತಿಲ್ಲ: ಕಾರ್ಲ್ ಸನ್
ಇನ್ನು ಪಂದ್ಯದ ಸೋಲಿನ ಕುರಿತು ಮಾತನಾಡಿದ ಮ್ಯಾಗ್ನಸ್ ಕಾರ್ಲ್ ಸನ್, 'ನಾನು ಎಲ್ಲಿ ಎಡವಿದ್ದೇನೆ ಎಂದು ಗೊತ್ತಾಗುತ್ತಿಲ್ಲ' ಎಂದು ಹೇಳಿದರು.
Advertisement