
ಬೆಂಗಳೂರು: ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಕ್ರೀಡಾ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ (PSB)ಪ್ರಾರಂಭಿಸುವುದಾಗಿ ಮಂಗಳವಾರ ಘೋಷಿಸಿದ್ದಾರೆ.
ದಿಗ್ಗಜ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರ ಪುತ್ರಿಯಾಗಿರುವ ದೀಪಿಕಾ ಪಡುಕೋಣೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.
ಬ್ಯಾಡ್ಮಿಂಟನ್ ಆಡುತ್ತಾ ಬೆಳೆದವನಾಗಿ, ಈ ಕ್ರೀಡೆಯು ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕವಾಗಿ ಒಬ್ಬರ ಜೀವನವನ್ನು ಹೇಗೆ ರೂಪಿಸುತ್ತದೆ ಎಂಬುದನ್ನು ನೇರವಾಗಿ ಅನುಭವಿಸಿದ್ದೇನೆ. ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ (ಪಿಎಸ್‌ಬಿ) ಮೂಲಕ ಎಲ್ಲಾ ವರ್ಗದ ಜನರಲ್ಲಿ ಸಂತೋಷ, ಶಿಸ್ತನ್ನು ಮೂಡಿಸಲು ಹಾಗೂ ಆರೋಗ್ಯದತ್ತ ಗಮನ ಹರಿಸುವ, ಕ್ರೀಡೆಯಿಂದ ಪ್ರೇರಿತವಾದ ಪೀಳಿಗೆಯನ್ನು ನಿರ್ಮಿಸಲು ನಾವು ಆಶಿಸುತ್ತೇವೆ" ಎಂದು ಅವರು ಬರೆದುಕೊಂಡಿದ್ದಾರೆ.
ಆರಂಭದಲ್ಲಿ ಬೆಂಗಳೂರು ಸೇರಿದಂತೆ ದೇಶದ 18 ನಗರಗಳಲ್ಲಿ 75 ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಈ ವರ್ಷದೊಳಗೆ 100 ಕೇಂದ್ರಗಳು, ಮೂರು ವರ್ಷಗಳಲ್ಲಿ 250 ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ.
Advertisement