
ನವದೆಹಲಿ: ಇತ್ತೀಚೆಗಷ್ಟೇ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ಇದೀಗ ತಮ್ಮ ವೃತ್ತಿಜೀವನದಲ್ಲಿ ಹಿನ್ನಡೆ ಉಂಟಾಗಿದೆ ಎಂದು ವರದಿಯಾಗಿದೆ. ಸಂದೀಪ್ ರೆಡ್ಡಿ ವಂಗಾ ಅವರ ಸ್ಪಿರಿಟ್ ಚಿತ್ರದಿಂದ ನಟಿಯನ್ನು 'ಕೈಬಿಟ್ಟ' ನಂತರ, ಪ್ರಭಾಸ್ ನಟನೆಯ 'ಕಲ್ಕಿ 2' ಚಿತ್ರದಿಂದಲೂ ಅವರನ್ನು ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.
Bollywood.mobi ವರದಿ ಪ್ರಕಾರ, ತಾಯಿಯಾದ ನಂತರ 'ಕೆಲಸದ ಅವಧಿಯನ್ನು ಕಡಿಮೆ' ಮಾಡುವಂತೆ ದೀಪಿಕಾ ಅವರು ವಿನಂತಿ ಮಾಡಿರುವುದು 'ಸೆಟ್‌ಗಳಲ್ಲಿ ಘರ್ಷಣೆ'ಗೆ ಕಾರಣವಾಗಿದೆ ಎಂದು ವರದಿಯಾಗಿದೆ.
'ಕಲ್ಕಿ 2' ಚಿತ್ರದ ನಿರ್ಮಾಪಕರು ಈಗ ಅವರನ್ನು ಚಿತ್ರದಿಂದ ಸಂಪೂರ್ಣವಾಗಿ ತೆಗೆದುಹಾಕುವ ಬಗ್ಗೆ ಯೋಚಿಸುತ್ತಿದ್ದಾರೆ ಎನ್ನಲಾಗಿದ್ದು, ನಟಿ ಅಥವಾ ನಿರ್ಮಾಪಕರು ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಈ ಹಿಂದೆ, ಸಂಭಾವನೆಗೆ ಸಂಬಂಧಿಸಿದ ಭಿನ್ನಾಭಿಪ್ರಾಯಗಳು ಮತ್ತು ವೃತ್ತಿಪರವಲ್ಲದ ನಡವಳಿಕೆಯಿಂದಾಗಿ ದೀಪಿಕಾ ಪಡುಕೋಣೆ ಅವರನ್ನು ಸಂದೀಪ್ ರೆಡ್ಡಿ ವಂಗಾ ಅವರ ಸ್ಪಿರಿಟ್ ಚಿತ್ರದಿಂದ ಕೈಬಿಡಲಾಗಿತ್ತು.
ದೀಪಿಕಾ ಪಡುಕೋಣೆ 'ಸ್ಪಿರಿಟ್' ಸಿನಿಮಾಗಾಗಿ ದಿನಕ್ಕೆ 6 ಗಂಟೆಗಳಿಗಿಂತ ಹೆಚ್ಚು ಕಾಲ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದರು. ಇದು ಸಂದೀಪ್ ರೆಡ್ಡಿ ವಂಗಾ ಅವರ ಆಘಾತಕ್ಕೆ ಕಾರಣವಾಯಿತು. ಅಲ್ಲದೆ, ನಟಿ ತಮ್ಮ ಸಂಸ್ಥೆಯ ಮೂಲಕ ಒಪ್ಪಂದಕ್ಕೆ ತಿದ್ದುಪಡಿ ತರಬೇಕೆಂದು ಒತ್ತಾಯಿಸಲು ಪ್ರಾರಂಭಿಸಿದರು. ಒಂದು ವೇಳೆ ಚಿತ್ರೀಕರಣ 100 ದಿನಗಳನ್ನು ಮೀರಿದರೆ, ಪ್ರತಿ ದಿನದ ಚಿತ್ರೀಕರಣಕ್ಕೂ ಹೆಚ್ಚುವರಿ ಹಣವನ್ನು ಪಾವತಿಸಬೇಕು' ಎಂದು ದೀಪಿಕಾ ಬೇಡಿಕೆ ಇಟ್ಟಿದ್ದರು ಎಂದು ಬಾಲಿವುಡ್ ಹಂಗಾಮಾಗೆ ಆಪ್ತ ಮೂಲಗಳು ತಿಳಿಸಿವೆ.
Advertisement