FIFA World Cup 2026| 'ನನಗಿಂತ ಮೊದಲು ಪೋರ್ಚುಗಲ್ ಒಂದೇ ಒಂದು ಪ್ರಶಸ್ತಿಯನ್ನೂ ಗೆದ್ದಿರಲಿಲ್ಲ'; ಇದು ನನ್ನ ಕೊನೆಯ ವಿಶ್ವಕಪ್: ಕ್ರಿಸ್ಟಿಯಾನೊ ರೊನಾಲ್ಡೊ

ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೊನಾಲ್ಡೊ, ಸ್ಪೇನ್‌ಗೆ ಸ್ವಲ್ಪ ಅದೃಷ್ಟ ಒಲಿದ ಕಾರಣ ಕೊನೆಯ ಕ್ಷಣದಲ್ಲಿ ಗೋಲು ಗಳಿಸಲು ಸಾಧ್ಯವಾಯಿತು. ಪಂದ್ಯ ಯಾವುದೇ ತಂಡದ ಪರವಾಗಿ ತಿರುಗಬಹುದಿತ್ತು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು.
Cristiano Ronaldo
ಕ್ರಿಸ್ಟಿಯಾನೊ ರೊನಾಲ್ಡೊ
Updated on

ಪೋರ್ಚುಗಲ್‌ನ ಸ್ಟಾರ್ ಫಾರ್ವರ್ಡ್ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕೊನೆಯ ವಿಶ್ವಕಪ್ ಅಭಿಯಾನವು ಸ್ಪೇನ್ ವಿರುದ್ಧದ ಸೋಲಿನೊಂದಿಗೆ ಅಂತ್ಯಗೊಂಡಿತು. ನಿನ್ನೆ ಸೋಮವಾರ ನಡೆದ ಪ್ರೀಕ್ವಾರ್ಟರ್ ಪಂದ್ಯದಲ್ಲಿ ಮಿಕೆಲ್ ಮೆರಿನೊ ಗಾಯದ ಸಮಯದಲ್ಲಿ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಸ್ಪೇನ್ 1-0 ಅಂತರದಲ್ಲಿ ಗೆದ್ದು ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿತು. ಆದರೆ ತಮ್ಮ ಅಂತಾರಾಷ್ಟ್ರೀಯ ಭವಿಷ್ಯದ ಬಗ್ಗೆ ಯಾವುದೇ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ರೊನಾಲ್ಡೊ ಸ್ಪಷ್ಟಪಡಿಸಿದರು.

ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೊನಾಲ್ಡೊ, ಸ್ಪೇನ್‌ಗೆ ಸ್ವಲ್ಪ ಅದೃಷ್ಟ ಒಲಿದ ಕಾರಣ ಕೊನೆಯ ಕ್ಷಣದಲ್ಲಿ ಗೋಲು ಗಳಿಸಲು ಸಾಧ್ಯವಾಯಿತು. ಪಂದ್ಯ ಯಾವುದೇ ತಂಡದ ಪರವಾಗಿ ತಿರುಗಬಹುದಿತ್ತು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು.

ಈ ರೀತಿಯಲ್ಲಿ ವಿಶ್ವಕಪ್‌ಗೆ ವಿದಾಯ ಹೇಳುತ್ತಿರುವುದು ನನಗೆ ತುಂಬಾ ದುಃಖ ತಂದಿದೆ. ನನ್ನಿಂದಾದ ಎಲ್ಲ ಪ್ರಯತ್ನವನ್ನೂ ಮಾಡಿದ್ದೇನೆ. ಮನಸ್ಸಿಗೆ ಯಾವುದೇ ಬೇಸರವಿಲ್ಲ. ಹೌದು, ಇದು ನನ್ನ ಕೊನೆಯ ವಿಶ್ವಕಪ್. ಈಗ ಕುಟುಂಬದೊಂದಿಗೆ ಸಮಯ ಕಳೆಯುತ್ತೇನೆ, ಎಲ್ಲವನ್ನೂ ಶಾಂತವಾಗಿ ಆಲೋಚಿಸುತ್ತೇನೆ. ಯಾವುದೇ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಹೇಳಿದರು.

Cristiano Ronaldo
Cristiano Ronaldo: ಪೋರ್ಚುಗಲ್​ ಟ್ರೋಫಿ ಕನಸು ಭಗ್ನ: ವಿಶ್ವಕಪ್​ಗೆ ಫುಟ್ಬಾಲ್‌ ಲೆಜೆಂಡ್ ರೊನಾಲ್ಡೊ ಕಣ್ಣೀರಿನ ವಿದಾಯ-Video

41 ವರ್ಷದ ರೊನಾಲ್ಡೊ, ಇದು ಪೋರ್ಚುಗಲ್ ಪರ ತಮ್ಮ ಕೊನೆಯ ಪಂದ್ಯವೇ ಎಂಬುದನ್ನು ಸ್ಪಷ್ಟಪಡಿಸಲಿಲ್ಲ. ತಮ್ಮ ವೈಯಕ್ತಿಕ ನಿರ್ಧಾರದಿಂದ ತಂಡದ ವಿಶ್ವಕಪ್ ಅಭಿಯಾನ ಮಸುಕಾಗಬಾರದು ಎಂದು ಅವರು ಹೇಳಿದರು.

ನಾನು ಭಾವೋದ್ವೇಗದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ರೊನಾಲ್ಡೊ ತಿಳಿಸಿದರು.

2016ರ ಯುರೋಪಿಯನ್ ಚಾಂಪಿಯನ್‌ಶಿಪ್ ಹಾಗೂ 2019 ಮತ್ತು 2025ರ ಯುಇಎಫ್‌ಎ ನೇಷನ್ಸ್ ಲೀಗ್ ಪ್ರಶಸ್ತಿಗಳನ್ನು ಪೋರ್ಚುಗಲ್‌ಗೆ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರೊನಾಲ್ಡೊ, ರಾಷ್ಟ್ರೀಯ ತಂಡಕ್ಕೆ ನೀಡಿದ ತಮ್ಮ ಕೊಡುಗೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

ನಾನು ಪೋರ್ಚುಗಲ್‌ಗೆ ಮೂರು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿದ್ದೇನೆ. ಕ್ರಿಸ್ಟಿಯಾನೊ ರೊನಾಲ್ಡೊಗೂ ಮೊದಲು ಪೋರ್ಚುಗಲ್ ಒಂದೇ ಒಂದು ಪ್ರಮುಖ ಪ್ರಶಸ್ತಿಯನ್ನೂ ಗೆದ್ದಿರಲಿಲ್ಲ ಎಂದು ಹೇಳಿದರು.

ನಮ್ಮ ರಾಷ್ಟ್ರೀಯ ತಂಡ ಇದುವರೆಗೆ ಗೆದ್ದಿರುವ ಅತಿದೊಡ್ಡ ಪ್ರಶಸ್ತಿ 2016ರ ಯುರೋಪಿಯನ್ ಚಾಂಪಿಯನ್‌ಶಿಪ್. ಪ್ರಾಮಾಣಿಕವಾಗಿ ಹೇಳುವುದಾದರೆ, ಅದು ನನಗೆ ವಿಶ್ವಕಪ್ ಗೆಲುವಿನಷ್ಟೇ ಮಹತ್ವದ್ದಾಗಿದೆ ಎಂದರು.

Cristiano Ronaldo
23 ವರ್ಷಗಳಿಂದ ನನ್ನನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ: Cristiano Ronaldo ಸ್ಫೋಟಕ ಹೇಳಿಕೆ

ಈ ಸೋಲಿನೊಂದಿಗೆ ಪೋರ್ಚುಗಲ್ ಮುಖ್ಯ ಕೋಚ್ ರಾಬರ್ಟೊ ಮಾರ್ಟಿನೆಜ್ ಅವರ ಅಧಿಕಾರಾವಧಿಯೂ ಅಂತ್ಯಗೊಂಡಿತು. ಈ ಸಂದರ್ಭದಲ್ಲಿ ಅವರ ಬಗ್ಗೆ ರೊನಾಲ್ಡೊ ಮೆಚ್ಚುಗೆಯ ಮಾತುಗಳನ್ನಾಡಿದರು.

ಅವರೊಂದಿಗೆ ಕೆಲಸ ಮಾಡುವುದು ನನಗೆ ತುಂಬಾ ಇಷ್ಟವಾಗಿತ್ತು. ಅವರು ಅತ್ಯುತ್ತಮ ಕೋಚ್ ಹಾಗೂ ಅದ್ಭುತ ವ್ಯಕ್ತಿ. ಪೋರ್ಚುಗಲ್‌ಗಾಗಿ ಅವರು ಮಾಡಿದ ಸೇವೆ ಪ್ರಶಂಸನೀಯ. ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಮತ್ತು ಮುಂದಿನ ಜೀವನಕ್ಕೆ ಶುಭ ಹಾರೈಸುತ್ತೇನೆ ಎಂದು ಹೇಳಿದರು.

ದೊಡ್ಡ ಟೂರ್ನಿಯಿಂದ ಹೊರಬೀಳುವುದು ಯಾವಾಗಲೂ ನೋವಿನ ಸಂಗತಿ. ಇದು ವಿಶ್ವಕಪ್. ನಮ್ಮ ತಂಡ ಉತ್ತಮವಾಗಿ ಆಡಿತ್ತು. ಪಂದ್ಯ ಯಾವ ದಿಕ್ಕಿಗೂ ತಿರುಗಬಹುದಿತ್ತು. ಆದರೆ ಅದೇ ಫುಟ್‌ಬಾಲ್. ನಾವು ಮತ್ತೆ ಎದ್ದು ಮುಂದೆ ಸಾಗಬೇಕು. ಈ ರೀತಿಯಾಗಿ ಹೊರಬೀಳುವುದು ನಿರಾಸೆ ತಂದಿದೆ. ಆದರೆ ನಾವು ಹೆಮ್ಮೆಯಿಂದ ತಲೆ ಎತ್ತಿ ನಿಲ್ಲಬಹುದು ಎಂದು ಅಲ್-ನಸ್ರ್ ತಂಡದ ಫಾರ್ವರ್ಡ್ ರೊನಾಲ್ಡೊ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com