

ಲಂಡನ್: ಪ್ರತಿಷ್ಠಿತ ರಾಯಲ್ ಬಾಕ್ಸ್ ನಿಂದ ವಿಂಬಲ್ಡನ್ ವೀಕ್ಷಿಸಲು ಇದೀಗ ಭಾರತೀಯ ಟೆಸ್ಟ್ ಮತ್ತು ಏಕದಿನ ನಾಯಕ ಶುಭಮನ್ ಗಿಲ್ ಅವರಿಗೆ ಆಹ್ವಾನ ಬಂದಿದೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಂತರ ಈ ಆಹ್ವಾನ ಪಡೆದ ನಾಲ್ಕನೇ ಭಾರತೀಯ ಕ್ರಿಕೆಟ್ ನಾಯಕ ಎಂಬ ಹೆಗ್ಗಳಿಕೆಗೆ ಶುಭಮನ್ ಗಿಲ್ ಪಾತ್ರರಾಗಿದ್ದಾರೆ.
ರಾಯಲ್ ಬಾಕ್ಸ್ ಬ್ರಿಟಿಷ್ ರಾಜಮನೆತನದ ಸದಸ್ಯರು, ಗಣ್ಯ ಅತಿಥಿಗಳು, ಕ್ರೀಡಾ ದಂತಕಥೆಗಳು ಮತ್ತು ಪ್ರಪಂಚದಾದ್ಯಂತದ ಗಮನಾರ್ಹ ವ್ಯಕ್ತಿಗಳಿಗೆ ಮೀಸಲಾಗಿರುವ ವಿಶೇಷ ಆವರಣವಾಗಿದೆ. ಡೇವಿಡ್ ಬೆಕ್‌ಹ್ಯಾಮ್, ರೋಜರ್ ಫೆಡರರ್ ಅವರಂತಹವರು ರಾಯಲ್ ಬಾಕ್ಸ್‌ನಿಂದ 2026 ರ ವಿಂಬಲ್ಡನ್ ವೀಕ್ಷಿಸಿದ್ದಾರೆ.
ಇಂತಹ ಪ್ರತಿಷ್ಟಿತ ಸ್ಥಳದಿಂದ ವಿಂಬಲ್ಡನ್ ವೀಕ್ಷಿಸಲು ಸಿಕ್ಕಿರುವ ಆಹ್ವಾನ ಭಾರತದ ಟೆಸ್ಟ್ ಮತ್ತು ಏಕದಿನ ನಾಯಕನಾಗಿ ನೇಮಕಗೊಂಡ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಿಲ್ ಅವರ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ.
ವಿಂಬಲ್ಡನ್‌ನಲ್ಲಿರುವ ರಾಯಲ್ ಬಾಕ್ಸ್ ವಿಶ್ವ ಕ್ರೀಡೆಯಲ್ಲಿ ಅತ್ಯಂತ ಪ್ರತಿಷ್ಠಿತ ಆತಿಥ್ಯ ಕ್ಷೇತ್ರಗಳಲ್ಲಿ ಒಂದಾಗಿದೆ. ಆಲ್ ಇಂಗ್ಲೆಂಡ್ ಕ್ಲಬ್‌ನ ಅಧ್ಯಕ್ಷರು ಮಾತ್ರ ಆಹ್ವಾನಗಳನ್ನು ನೀಡುತ್ತಾರೆ. ಜಾಗತಿಕ ಕ್ರೀಡಾ ಐಕಾನ್‌ಗಳು, ರಾಷ್ಟ್ರಗಳ ಮುಖ್ಯಸ್ಥರು, ಸೆಲೆಬ್ರಿಟಿಗಳು ಮತ್ತು ಗಣ್ಯ ಅತಿಥಿಗಳನ್ನು ಮಾತ್ರ ಇದಕ್ಕೆ ಆಹ್ವಾನಿಸಲಾಗುತ್ತದೆ.