

ನ್ಯೂಯಾರ್ಕ್: ಬ್ರೆಜಿಲ್‌ನ ಫುಟ್‌ಬಾಲ್ ದಂತಕಥೆ ರೊನಾಲ್ಡೊ ನಜಾರಿಯೊ ಅವರು ಪ್ರಸಿದ್ಧ ಯೂಟ್ಯೂಬರ್ ಐಶೋಸ್ಪೀಡ್ (IShowSpeed) ಅವರ ಕಾಲೆಳೆದಿರುವ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿದೆ.
ಈ ಇಬ್ಬರು ದಿಗ್ಗಜರು ನ್ಯೂಯಾರ್ಕ್ ನ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನಡೆದ ಬ್ರೆಜಿಲ್ ಮತ್ತು ಮೊರಕ್ಕೂ ನಡುವಣ ಫಿಫಾ ವಿಶ್ವ ಕಪ್ 2026 ಪಂದ್ಯದಲ್ಲಿ ಭೇಟಿಯಾದಾಗ ಇದು ನಡೆದಿದೆ.
ಯೂಟ್ಯೂಬರ್ IShowSpeed ಅವರ ಅತ್ಯುತ್ತಮ ದೇಹದಾರ್ಢ್ಯವನ್ನು ಕಂಡು ಆಶ್ಚರ್ಯಚಕಿತರಾದ ರೊನಾಲ್ಡೊ, ತಮಾಷೆಯಾಗಿ, ನೀವು ಹೀಗೆ ದೇಹ ಬೆಳೆಸಲು ಏನನ್ನಾದರೂ ತೆಗೆದುಕೊಳ್ಳುತ್ತೀರಾ? ಎಂದು ಕೇಳುತ್ತಾರೆ.
ಇದಕ್ಕೆ ಉತ್ತರಿಸುವ IShowSpeed ತನ್ನ ಸಿಕ್ಸ್-ಪ್ಯಾಕ್ ಆಬ್ಸ್ ತೋರಿಸಿ, ಇದು ಜಿಮ್‌ನಲ್ಲಿನ ಕಠಿಣ ಪರಿಶ್ರಮದಿಂದ ಬೆಳೆದದ್ದು ಎಂದು ಹೇಳುತ್ತಾರೆ.
ತನ್ನ ಸಿಕ್ಸ್ ಪ್ಯಾಕ್ಸ್ ಸಹಜವಾಗಿದೆ. ಇದಕ್ಕೆ ಸಾಬೀತುಪಡಿಸಲು ಬೇಕಾದರೆ ರಕ್ತಪರೀಕ್ಷೆ ಮಾಡಿಸಲು ಸಿದ್ಧ ಎಂದು ಸ್ಪೀಡ್ ಹೇಳುತ್ತಾರೆ. ಬಳಿಕ ತನ್ನ ಫಿಟ್ನೆಸ್ ಬಗ್ಗೆಗಿನ ರೊನಾಲ್ಡೊ ಅವರ ಅಪನಂಬಿಕೆಯನ್ನು ಪ್ರಶಂಸೆಯಾಗಿ ತೆಗೆದುಕೊಳ್ಳುತ್ತೇನೆ ಎಂದು ಸ್ಪೀಡ್ ಹೇಳುತ್ತಾರೆ. ಹೋಗಿ ರಕ್ತ ಪರೀಕ್ಷೆ ಮಾಡಿಸಿ ಎಂದು ರೋನಾಲ್ಡ್ ಹೇಳಿ ಹೋಗುವುದು ವಿಡಿಯೋದಲ್ಲಿದೆ.
Advertisement