

ನವೆದಹಲಿ: ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರ ಏಷ್ಯನ್ಸ್ ಗೇಮ್ಸ್ ಕನಸು ಭಗ್ನವಾಗಿದೆ. ನವದೆಹಲಿಯಲ್ಲಿ ಶನಿವಾರ ನಡೆದ ಮಹಿಳೆಯರ 53 ಕೆಜಿ ತೂಕ ವಿಭಾಗದಲ್ಲಿ ಸೆಮಿ ಫೈನಲ್ ನಲ್ಲಿ ಮೀನಾಕ್ಷಿ ಗೋಯತ್ ವಿರುದ್ಧ ಮೀನಾಕ್ಷಿ ವಿರುದ್ಧ 4-6 ಅಂತರದಲ್ಲಿ ಸೋತರು.
ಇದರೊಂದಿಗೆ ಈ ವರ್ಷದ ಅಂತ್ಯದಲ್ಲಿ ಜಪಾನ್ ನಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ಕುಸ್ತಿ ಸ್ಪರ್ಧೆಯಲ್ಲಿ ಸ್ಥಾನ ಭದ್ರ ಪಡಿಸಿಕೊಳ್ಳುವ ಅವಕಾಶ ಕೈ ತಪ್ಪಿತು.
ಇದಕ್ಕೂ ಮುನ್ನಾ ನಡೆದ ಏಷ್ಯನ್ ಗೇಮ್ಸ್ ಟ್ರಯಲ್ಸ್ ಪಂದ್ಯದಲ್ಲಿ ನಿಶು ವಿರುದ್ಧ ವಿನೇಶ್ ಪ್ರಬಲ ಹೋರಾಟ ನಡೆಸಿದರು. ವಿನೇಶ್ ತನ್ನ ಏಷ್ಯನ್ ಗೇಮ್ಸ್ ಟ್ರಯಲ್ಸ್ ಅನ್ನು ಉತ್ತಮ ರೀತಿಯಲ್ಲಿ ಆರಂಭಿಸಿದರು, ತನ್ನ ಮೊದಲ ಪಂದ್ಯದಲ್ಲಿ ಜ್ಯೋತಿ ವಿರುದ್ಧ 7-1 ಅಂತರದ ಭರ್ಜರಿ ಜಯ ಸಾಧಿಸಿದರು. ನಂತರ ವಿನೇಶ್ ನಿಶು ಅವರನ್ನು ಎದುರಿಸಿದರು. ಈ ರೋಚಕ ಸ್ಪರ್ಧೆಯಲ್ಲಿ ಹೈಡ್ರಾಮವೂ ನಡೆಯಿತು.
ವಿನೇಶ್ ಫೋಗಟ್ ಅವರಿಗೆ ಯುವ ಕುಸ್ತಿಪಟು ನಿಶು ಅವರಿಂದ ನಿರೀಕ್ಷೆಗೂ ಮೀರಿದ ಪೈಪೋಟಿ ಎದುರಾಯಿತು. ಪಂದ್ಯದ ಆರಂಭದಿಂದಲೇ ಇಬ್ಬರೂ ಆಟಗಾರ್ತಿಯರು ಪಾಯಿಂಟ್‌ಗಳಿಗಾಗಿ ತೀವ್ರ ಕಸರತ್ತು ನಡೆಸಿದರು.
ವಿನೇಶ್ ತಮ್ಮ ಅನುಭವದ ಆಟವನ್ನು ಪ್ರದರ್ಶಿಸಿ ಆರಂಭಿಕ ಮುನ್ನಡೆ ಪಡೆದರೂ, ನಿಶು ಅತ್ಯಂತ ಚಾಣಾಕ್ಷತನದಿಂದ ಕೌಂಟರ್ ಅಟ್ಯಾಕ್ ಮಾಡಿ ಅಂಕಗಳ ಅಂತರವನ್ನು ಕಡಿಮೆಗೊಳಿಸುತ್ತಾ ಬಂದರು. ಒಂದು ಹಂತದಲ್ಲಿ ಇಬ್ಬರ ನಡುವಿನ ಸ್ಕೋರ್ ಅತ್ಯಂತ ನಿಕಟವಾಗಿತ್ತು. ಆದರೆ, ಪಂದ್ಯದ ಕೊನೆಯ ನಿರ್ಣಾಯಕ ಕ್ಷಣಗಳಲ್ಲಿ ವಿನೇಶ್ ಫೋಗಟ್ ತಮ್ಮ ದೈಹಿಕ ಸಾಮರ್ಥ್ಯ ಹಾಗೂ ರಕ್ಷಣಾತ್ಮಕ ಪಟ್ಟುಗಳನ್ನು ಅದ್ಭುತವಾಗಿ ಬಳಸಿ ಎದುರಾಳಿಯ ಆಕ್ರಮಣವನ್ನು ತಡೆದರು.
ಅಂತಿಮವಾಗಿ 7-6 ರ ರೋಚಕ ಅಂಕಗಳ ಅಂತರದಲ್ಲಿ ನಿಶು ಸೋಲಿಸುವ ಮೂಲಕ ವಿನೇಶ್ ಪಂದ್ಯವನ್ನು ತಮ್ಮದಾಗಿಸಿಕೊಂಡರು. ಬಳಿಕ ನಡೆದ ಹೈವೋಲ್ಟೇಜ್ ಸೆಮಿ ಫೈನಲ್ ಪಂದ್ಯದಲ್ಲಿ ಮೀನಾಕ್ಷಿ ಗೋಯತ್ ವಿರುದ್ಧ 4-6 ಅತರದಿಂದ ಸೋತರು.
Advertisement