Asian Games 2026: ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಸ್ವರ್ಣ ಪದಕ; 12 ವರ್ಷಗಳ ಬಂಗಾರದ ಬರ ನೀಗಿಸಿದ ಲವ್ಲಿನಾ; ಹುಟ್ಟುಹಬ್ಬದ ದಿನವೇ ಚಿನ್ನದ ಗಿಫ್ಟ್‌ !

ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಚೀನಾದ ಜಿಯಿ ಬಾವೊ ವಿರುದ್ಧ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಲವ್ಲಿನಾ 5-0 ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
 Lovlina Borgohain
ಲವ್ಲಿನಾ ಬೊರ್ಗೊಹೈನ್
Updated on: 

ನಿಶಿಯೊ: ಏಷ್ಯನ್ ಗೇಮ್ಸ್ ಮಹಿಳೆಯರ ಬಾಕ್ಸಿಂಗ್ 75 ಕೆ.ಜಿ ವಿಭಾಗದಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್ ಚಿನ್ನದ ಪದಕ ಗೆದ್ದಿದ್ದಾರೆ. ಆ ಮೂಲಕ ಮಹಿಳಾ ಬಾಕ್ಸಿಂಗ್ಸ್‌ನಲ್ಲಿ ದೇಶದ 12 ವರ್ಷಗಳ ಚಿನ್ನದ ಪದಕದ ಬರವನ್ನು ನೀಗಿಸಿದ್ದು, ಹುಟ್ಟುಹಬ್ಬದ ಸಂಭ್ರಮದ ದಿನದಂದೇ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಚೀನಾದ ಜಿಯಿ ಬಾವೊ ವಿರುದ್ಧ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಲವ್ಲಿನಾ 5-0 ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಒಟ್ಟಾರೆಯಾಗಿ ಏಷ್ಯನ್ ಗೇಮ್ಸ್ ಬಾಕ್ಸಿಂಗ್‌ನಲ್ಲಿ ಚಿನ್ನ ಗೆದ್ದ ಭಾರತದ ಎರಡನೇ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2014ರಲ್ಲಿ ಬಾಕ್ಸಿಂಗ್ ದಂತಕಥೆ ಎಂ.ಸಿ. ಮೇರಿ ಕೋಮ್ (51 ಕೆಜಿ ಫ್ಲೈವೇಟ್ ವಿಭಾಗ) ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು.

ಮೊದಲ ರೌಂಡ್‌ನಲ್ಲಿ ಚೀನಾದ ಬಾಲ್ ಝಿಯಾ ಮುನ್ನಡೆ ಸಾಧಿಸಿದರೂ ಕೂಡ ಲವ್ಲಿನಾ ಎಚ್ಚರಿಕೆಯಿಂದ ಪ್ರತಿದಾಳಿ ನಡೆಸಿದರು. ಆದರೆ ಛಲ ಬಿಡದೇ ಲವ್ಲಿನಾ ಅಂತಿಮ ಹಂತದಲ್ಲಿ 5-0 ಅಂತರದಲ್ಲಿ ಗೆಲುವು ತಮ್ಮದಾಗಿಸಿಕೊಂಡರು

 Lovlina Borgohain
ಏಷ್ಯನ್ ಗೇಮ್ಸ್ 2026: ಫೈನಲ್ ಪ್ರವೇಶಿಸಿದ ಭಾರತೀಯ ಮಹಿಳಾ ಹಾಕಿ ತಂಡ; ಚಿನ್ನಕ್ಕಾಗಿ ಚೀನಾ ವಿರುದ್ಧ ಸೆಣಸಾಟ!

ಇಂದು ನನ್ನ ಹುಟ್ಟುಹಬ್ಬ. ಇದು ಅತ್ಯಂತ ವಿಶೇಷವಾದ ದಿನವಾಗಿದ್ದು, ಅತೀವ ಸಂತಸ ತಂದಿದೆ. ಹುಟ್ಟುಹಬ್ಬಕ್ಕೆ ಚಿನ್ನದ ಪದಕವನ್ನು ಗೆಲ್ಲಬೇಕೆಂದು ಸಂಕಲ್ಪ ಮಾಡಿದ್ದೆ. ಅದಕ್ಕಾಗಿ ಪರಿಶ್ರಮಪಟ್ಟೆ. ಯಾವುದೇ ಕಾರಣಕ್ಕೂ ಸೋಲಬಾರದು ಎಂಬ ದೃಢತೆ ಇತ್ತು' ಎಂದು ಗೆಲುವಿನ ಬಳಿಕ ಲವ್ಲಿನಾ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಮೂಲಕ ಭಾರತದ ಒಟ್ಟು ಪದಕಗಳ ಸಂಖ್ಯೆ 70ಕ್ಕೆ ಏರಿಕೆಯಾಗಿದೆ. ಇದರಲ್ಲಿ 12 ಚಿನ್ನ, 24 ಬೆಳ್ಳಿ ಹಾಗೂ 34 ಕಂಚಿನ ಪದಕಗಳು ಸೇರಿವೆ. ಇನ್ನೂ ಮಹಿಳಾ ಹಾಗೂ ಪುರುಷರ ಹಾಕಿ ಫೈನಲ್‌ನಲ್ಲಿ ಭಾರತ ತಂಡ ಚಿನ್ನಕ್ಕಾಗಿ ಬೇಟೆಯಾಡಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com