ಏಷ್ಯನ್ ಗೇಮ್ಸ್ 2026: 'ರಿಕರ್ವ್ ಆರ್ಚರಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಮೊಹೋದ್ ಕುಂಕುಮ್!

17 ವರ್ಷದ ಕುಂಕುಮ್ ನಾಕೌಟ್ ಹಂತಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ದಕ್ಷಿಣ ಕೊರಿಯಾ, ಚೀನಾದ ಒಲಿಂಪಿಕ್ ಚಾಂಪಿಯನ್‌ಗಳು ಹಾಗೂ ವಿಶ್ವ ಮಟ್ಟದ ಪದಕ ವಿಜೇತರನ್ನು ಸೋಲಿಸುವ ಮೂಲಕ ಕ್ರೀಡಾಕೂಟದಲ್ಲಿ ಅಗ್ರಸ್ಥಾನಕ್ಕೇರಿದರು.
Mohod Kumkum Anil
ಮೊಹೋದ್ ಕುಂಕುಮ್
Updated on: 

ಏಷ್ಯನ್ ಗೇಮ್ಸ್ 2026: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಬಿಲ್ಲುಗಾರಿಕೆಯಲ್ಲಿ ಭಾರತದ ಬಿಲ್ಲುಗಾರ್ತಿ ಮೊಹೋದ್ ಕುಂಕುಮ್ ಅನಿಲ್ ಇತಿಹಾಸ ನಿರ್ಮಿಸಿದರು. ಅವರು ಮಹಿಳೆಯರ ವೈಯಕ್ತಿಕ ರಿಕರ್ವ್ ವಿಭಾಗದ ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಓ ಯೆಜಿನ್ ಅವರನ್ನು ಸೋಲಿಸಿ ಚಿನ್ನದ ಪದಕವನ್ನು ಗೆದ್ದುಕೊಂಡರು.

17 ವರ್ಷದ ಕುಂಕುಮ್ ನಾಕೌಟ್ ಹಂತಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ದಕ್ಷಿಣ ಕೊರಿಯಾ, ಚೀನಾದ ಒಲಿಂಪಿಕ್ ಚಾಂಪಿಯನ್‌ಗಳು ಹಾಗೂ ವಿಶ್ವ ಮಟ್ಟದ ಪದಕ ವಿಜೇತರನ್ನು ಸೋಲಿಸುವ ಮೂಲಕ ಕ್ರೀಡಾಕೂಟದಲ್ಲಿ ಅಗ್ರಸ್ಥಾನಕ್ಕೇರಿದರು.

ಕ್ವಾರ್ಟರ್-ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಕಾಂಗ್ ಚಾಯಾಂಗ್ ಅವರನ್ನು ಸೋಲಿಸುವ ಮೂಲಕ ಕುಂಕುಮ್ ತಮ್ಮ ಐತಿಹಾಸಿಕ ಪಯಣಕ್ಕೆ ವೇದಿಕೆ ಸಿದ್ಧಪಡಿಸಿಕೊಂಡರು. ಸವಾಲಿನ ಪರಿಸ್ಥಿತಿಯಲ್ಲಿಯೂ ಸಂಯಮ ಕಾಯ್ದುಕೊಂಡ ಈ ಭಾರತೀಯ ಆಟಗಾರ್ತಿ, ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದ ಕಾಂಗ್ ವಿರುದ್ಧ 6-4 ಅಂತರದಿಂದ ಜಯ ಸಾಧಿಸಿದರು.

ಶನಿವಾರ ಬೆಳಿಗ್ಗೆ ನಡೆದ ಸೆಮಿ-ಫೈನಲ್‌ನಲ್ಲಿ, ಹಾಲಿ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತೆ ಚೀನಾದ ಝು ಜಿಂಗ್ಯಿ ವಿರುದ್ಧವೂ ಅವರು ತಮ್ಮ ಅದೇ ಲಯವನ್ನು ಮುಂದುವರಿಸಿದರು. ಕುಂಕುಮ್ ಆಕ್ರಮಣಕಾರಿ ಆಟದೊಂದಿಗೆ ಪಂದ್ಯವನ್ನು ಆರಂಭಿಸಿದರು.

ಝು ಅವರ 27 ಅಂಕಗಳಿಗೆ ಪ್ರತಿಯಾಗಿ 28 ಅಂಕಗಳನ್ನು ಗಳಿಸುವ ಮೂಲಕ ಮೊದಲ ಸೆಟ್ ಅನ್ನು ತಮ್ಮದಾಗಿಸಿಕೊಂಡು, 2-0 ಮುನ್ನಡೆ ಸಾಧಿಸಿದರು. ಎರಡನೇ ಸೆಟ್‌ನಲ್ಲಿ ಇಬ್ಬರೂ ಬಿಲ್ಲುಗಾರರು ವಿಶ್ವ ದರ್ಜೆಯ ಪ್ರದರ್ಶನ ನೀಡಿದರು ಮತ್ತು ತಲಾ 30 ಅಂಕಗಳ ಪರಿಪೂರ್ಣ ಸ್ಕೋರ್ ದಾಖಲಿಸಿದರು. ಅಂಕಗಳ ಹಂಚಿಕೆಯೊಂದಿಗೆ ಸ್ಕೋರ್ ಕುಂಕುಮ್ ಪರ 3-1 ಕ್ಕೆ ಏರಿತು. ನಂತರ ಅವರು 6-2 ಅಂತರದ ಭರ್ಜರಿ ಗೆಲುವಿನೊಂದಿಗೆ ಸೆಮಿ-ಫೈನಲ್ ಪಂದ್ಯವನ್ನು ಮುಕ್ತಾಯಗೊಳಿಸಿ, ಚಿನ್ನದ ಪದಕದ ಸುತ್ತಿಗೆ ಅರ್ಹತೆ ಪಡೆದರು.

Mohod Kumkum Anil
Asian Games 2026: 1 ನಿಮಿಷದಲ್ಲಿ 2 ಚಿನ್ನದ ಪದಕ ಗೆದ್ದ ಭಾರತ; 75 ಪದಕಗಳೊಂದಿಗೆ 5ನೇ ಸ್ಥಾನಕ್ಕೆ ಲಗ್ಗೆ!

ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಮತ್ತೊಬ್ಬ ಪ್ರಬಲ ಸ್ಪರ್ಧಿ ಓ ಯೆಜಿನ್ ಅವರನ್ನು ಎದುರಿಸಿದ ಕುಂಕುಮ್, ಒತ್ತಡದ ನಡುವೆಯೂ ಗಮನಾರ್ಹವಾಗಿ ನಿಖರತೆಯನ್ನು ಕಾಯ್ದುಕೊಂಡರು. ಈ ಗೆಲುವಿನೊಂದಿಗೆ ಮೊಹೋದ್ ಕುಂಕುಮ್ ಅನಿಲ್ ಏಷ್ಯನ್ ಗೇಮ್ಸ್‌ನಲ್ಲಿ ವೈಯಕ್ತಿಕ ರಿಕರ್ವ್ ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಬಿಲ್ಲುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.ಇದು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಒಂದು ಮಹತ್ವದ ಸಾಧನೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com