ಈಡನ್ ಗಾರ್ಡನ್‌ನಲ್ಲಿ ಕ್ರಿಕೆಟ್ ಆಡಿದ ಉರುಗ್ವೆ ಫುಟ್ ಬಾಲ್ ಸ್ಟಾರ್ ಗಳು! Video

ಉರುಗ್ವೆಯಲ್ಲಿ ಫುಟ್ ಬಾಲ್ ಕ್ರೀಡಾ ಜೀವನದ ಹೃದಯಭಾಗದಲ್ಲಿ ಉಳಿದಿದ್ದರೂ ಭಾರತದ ಪ್ರಸಿದ್ಧ ಕ್ರೀಡಾಂಗಣಗಳಲ್ಲಿ ಒಂದಾದ ಮೈದಾನದಲ್ಲಿ ಕ್ರಿಕೆಟ್ ಆಡುವ ಮೂಲಕ ಸಂತಸಪಟ್ಟರು.
Uruguay football stars at the Eden Gardens Stadium
ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಉರುಗ್ವೆ ಫುಟ್‌ಬಾಲ್ ತಾರೆಯರು
Updated on: 

ಕೋಲ್ಕತ್ತ: ಭಾರತದ ವಿರುದ್ಧ ಸೌಹಾರ್ದ ಪಂದ್ಯಕ್ಕಾಗಿ ಕೋಲ್ಕತ್ತಕ್ಕೆ ಆಗಮಿಸಿರುವ ಎರಡು ಬಾರಿ ಫಿಫಾ ವಿಶ್ವಕಪ್ ವಿಜೇತ ಉರುಗ್ವೆ ತಂಡದ ಪುಟ್ ಬಾಲ್ ತಾರೆಯರು, ಐಕಾನಿಕ್ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ಕ್ರಿಕೆಟ್ ಆಡುವ ಮೂಲಕ ಗಮನ ಸೆಳೆದರು.

ಉರುಗ್ವೆಯಲ್ಲಿ ಫುಟ್ ಬಾಲ್ ಕ್ರೀಡಾ ಜೀವನದ ಹೃದಯಭಾಗದಲ್ಲಿ ಉಳಿದಿದ್ದರೂ ಭಾರತದ ಪ್ರಸಿದ್ಧ ಕ್ರೀಡಾಂಗಣಗಳಲ್ಲಿ ಒಂದಾದ ಮೈದಾನದಲ್ಲಿ ಕ್ರಿಕೆಟ್ ಆಡುವ ಮೂಲಕ ಸಂತಸಪಟ್ಟರು.

ಈಡನ್ ಗಾರ್ಡನ್ಸ್‌ನಲ್ಲಿ ಅವರ ಕ್ರಿಕೆಟ್ ಆಟ ಎರಡು ದೇಶಗಳ ನಡುವಿನ ಸಾಂಸ್ಕೃತಿಕ ವಿಭಿನ್ನತೆಯ ಒಂದು ನೋಟವನ್ನು ನೀಡಿತು ಮತ್ತು ಸೌಹಾರ್ದ ಪಂದ್ಯಕ್ಕೂ ಮುನ್ನ ಅಭಿಮಾನಿಗಳಿಗೆ ಆಸಕ್ತಿದಾಯಕ ಕ್ಷಣವನ್ನು ಒದಗಿಸಿತು.

ಉರುಗ್ವೆಯ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವೀಡಿಯೋದಲ್ಲಿ, ಪುಟ್ ಬಾಲ್ ಆಟಗಾರರು ಈಡನ್ ಗಾರ್ಡನ್ಸ್‌ನಲ್ಲಿ ಕ್ರಿಕೆಟ್ ಆಡುವ ಮುನ್ನ ಕೋಲ್ಕತ್ತಾದಲ್ಲಿ ಸುತ್ತಾಡಿರುವುದು ಇದೆ. ಇದರಲ್ಲಿ ರೊನಾಲ್ಡ್ ಅರೌಜೊ ಮತ್ತು ಡಾರ್ವಿನ್ ನುನೆಜ್ ಕಾಣಿಸಿಕೊಂಡಿದ್ದಾರೆ.

Uruguay football stars at the Eden Gardens Stadium
ಫೋಟೋ ಸೆಷನ್ ವಿಳಂಬ: ಬಂಗಾಳದ ಸಿಎಂ ಔತಣಕೂಟ ನಿರಾಕರಿಸಿ ಹೊರ ನಡೆದ ಬ್ರೆಜಿಲ್ ತಂಡ!

ಅಕ್ಟೋಬರ್ 6 ರಂದು ಕೋಲ್ಕತ್ತಾದ ವಿವೇಕಾನಂದ ಯುವ ಭಾರತಿ ಮೈದಾನದಲ್ಲಿ ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಉರುಗ್ವೆ ಆಟಗಾರರು ಈ ಭೇಟಿ ನೀಡಿದ್ದಾರೆ. ಐದು ಬಾರಿ ಫಿಫಾ ವಿಶ್ವಕಪ್ ವಿಜೇತ ಬ್ರೆಜಿಲ್‌ನೊಂದಿಗೆ ಮುಖಾಮುಖಿಯಾದ ನಂತರ ದಕ್ಷಿಣ ಅಮೆರಿಕಾದ ಮತ್ತೊಂದು ಹೆವಿವೇಯ್ಟ್ ಅನ್ನು ಎದುರಿಸಲು ಭಾರತ ತಯಾರಿ ನಡೆಸುತ್ತಿರುವಂತೆಯೇ ಈ ಕ್ರಿಕೆಟ್ ಪಂದ್ಯ ಗಮನಾರ್ಹವಾಗಿ ಗಮನ ಸೆಳೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com