ಒಂದು ಎಸ್‌ಎಂಎಸ್‌ನಲ್ಲಿ ಹೀಗಿತ್ತು-
ಇದನ್ನು ಓದದವರು ಜಾಣರೇನಲ್ಲ.......
ಓದದೇ ಇರುವವರು ಲೂಸು......!
ನಕ್ಕವರು ಮೆಂಟಲ್!
ಕೋಪ ಮಾಡಿಕೊಂಡ್ರೆ ಕೋತಿ!
ನನಗೆ ತಿರುಗಿ ಕಳುಹಿಸಿದ್ರೆ ಎಮ್ಮೆ!
ಏನೂ ಮಾಡದಿದ್ರೆ ದಂಡಪಿಂಡ!
ಕಾಲ್ ಮಾಡಿದ್ರೆ ತರ್ಲೆ!
ಸೇವ್ ಮಾಡಿದವರು ಗುಗ್ಗು!
ಈಗ ಏನು ಮಾಡುತ್ತೀರಾ?
ಸಂತಾ: ಬಂತಾ, ನಾನು ಇನ್ಮುಂದೆ ಏನಿದ್ರೂ ಫಸ್ಟ್‌ಷೋ ಫಿಲ್ಮ್ ಮಾತ್ರ ನೋಡ್ತೇನೆ. ಆ ಹೀರೋ ಮ್ಯಾಟಿನಿಯಲ್ಲಿ ಸರಿಯಾಗಿ ಫೈಟೇ ಮಾಡಲ್ಲ. ಅವನಿಗೆ ಸುಸ್ತಾಗಿರುತ್ತೆ ಅಂತ ಕಾಣುತ್ತೆ.
ಬಂತಾ: ನಿನ್ನಂಥವರಿಂದಲೇ ನಮ್ಮ ಕುಲಕ್ಕೆ ಮೂರ್ಖರು ಅಂತ ಹೆಸರು ಬಂದಿರೋದು!
ಯಾವಾಗ್ಲೂ ಮ್ಯಾಟಿನಿಯಲ್ಲೇ ಹೀರೋ ಚೆನ್ನಾಗಿ ಫೈಟ್ ಮಾಡೋದು. ಯಾಕಂದ್ರೆ ಅವ್ನಿಗೆ ಫಸ್ಟ್ ಷೋದಲ್ಲಿ ಪ್ರಾಕ್ಟೀಸ್ ಆಗಿರುತ್ತೆ.
ಇಬ್ಬರು ಸರ್ದಾರ್ಜಿಗಳು ಫೈವ್ ಸ್ಟಾರ್ ಹೋಟೆಲ್‌ಗೆ ನುಗ್ಗಿದರು. ಅಲ್ಲಿ ಎರಡು ಕಾಫಿಗೆ ಆರ್ಡ್‌ರ್ ಮಾಡಿ, ಮನೆಯಿಂದ ತಂದಿದ್ದ ತಿಂಡಿ ಪೊಟ್ಟಣ ಬಿಚ್ಚಿ ತಿನ್ನತೊಡಗಿದರು. ಸಪ್ಲೈಯರ್ ಓಡಿ ಬಂದು, ಸಾರ್ ನಿಮ್ಮ ತಿಂಡಿಗಳನ್ನು ಇಲ್ಲಿ ತಿನ್ನುವಂತಿಲ್ಲ ಎಂದ. ಕೂಡಲೇ ತಮ್ಮ ತಿಂಡಿ ಪೊಟ್ಟಣಗಳನ್ನು ಅದಲುಬದಲು ಮಾಡಿಕೊಂಡು ತಿನ್ನ ತೊಡಗಿದರು!
ಗುಂಡ ವಿದ್ಯಾರ್ಥಿ ಭವನಕ್ಕೆ ದೋಸೆ ತಿನ್ನೋಕೆ ಹೋಗ್ತಾನೆ. ದೋಸೆ ತಿಂದು ವೈಟರ್‌ಗೆ ಒಂದು ರುಪಾಯಿ ಟಿಪ್ಸ್ ಕೊಡ್ತಾನೆ.
ವೈಟರ್: ಏನ್ ಸಾರ್, ಒಂದು ರುಪಾಯಿ ಕೊಡ್ತಾ ಇದ್ದೀರಲ್ಲಾ... ನಿಮ್ಮ ಮಗನೇ ಪರವಾಗಿಲ್ಲ.
ಗುಂಡ: ಅವ್ನ ಅಪ್ಪ ಸಾಹುಕಾರ ಕಣಪ್ಪಾ... ನನ್ನಪ್ಪ ಬಡವ ತಿಳೀತಾ?
Advertisement