ಕಲಾಚಕ್ರ

ಎಲ್ಲ ಕಲೆ, ಕಾವ್ಯಗಳನ್ನು ಪ್ಲಸ್ಸು, ಮೈನಸ್ಸುಗಳ ದ್ವಿಮಾನ ತರ್ಕಕ್ಕೆ ಇಳಿಸಿ ನೋಡುತ್ತಿರುವ ಈ ಹೊತ್ತು ಕಲಾನುಭವವನ್ನು ವಿವರಿಸಿಕೊಡಲು...
ಕಲಾಚಕ್ರ
Updated on: 

-ತನು ಮನು ತೆರೆದ ಚಿತ್ರ

ಎಲ್ಲ ಕಲೆ, ಕಾವ್ಯಗಳನ್ನು ಪ್ಲಸ್ಸು, ಮೈನಸ್ಸುಗಳ ದ್ವಿಮಾನ ತರ್ಕಕ್ಕೆ ಇಳಿಸಿ ನೋಡುತ್ತಿರುವ ಈ ಹೊತ್ತು ಕಲಾನುಭವವನ್ನು ವಿವರಿಸಿಕೊಡಲು ಹೊಸ ಪರಿಕಲ್ಪನೆಗಳು ಬೇಕಾಗಿವೆ ಎಂದು ಈ ಚಿತ್ರಗಳು ಒತ್ತಾಯಿಸುತ್ತಿವೆ. ಇನ್ನು ಮೇಲೆ ಚಿತ್ರದ ಅಳತೆ, ಬಳಸಿರುವ ಮಾಧ್ಯಮ ಅನ್ವಯಿಸಿಕೊಂಡಿರುವ ತಂತ್ರ ಇತ್ಯಾದಿಗಳನ್ನು ದಾಟಿ ಚಿತ್ರವನ್ನು ವಿವರಿಸಿಕೊಡುವ ಅಗತ್ಯವಿದೆ...
ಕೆ.ಎನ್. ಮನು ಚಕ್ರವರ್ತಿ ಅವರ ಪೇಂಟಿಂಗ್‌ಗಳ ಬಗ್ಗೆ ಎಸ್. ನಟರಾಜ ಬೂದಾಳು ಹೇಳುವ ಮಾತಿದು.
ಮನು ಚಕ್ರವರ್ತಿ ತುಮಕೂರಿನವರು. 'ಬಣ್ಣಗಳ ಲೋಕದಲ್ಲಿ' ನಾನು ನಡೆದು ಬಂದ ದಾರಿ ಖುಷಿ ಇದೆ ಎನ್ನುತ್ತಲೇ ಮಾತಿಗಿಳಿದರು ಮನು.
ಮೊದಲಿಗೆ ಪೇಂಟಿಂಗ್ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಳ್ಳುತ್ತೇನೆ ಎಂದಾಗ ಮನೆಯವರಿಗೆ ಗೊಂದಲವಾಗಿದ್ದು ನಿಜ. ತುಮಕೂರಿನಂಥ ದೊಡ್ಡ ಊರಿನಲ್ಲಿ ಇದರಿಂದಲೇ ಹೊಟ್ಟೆಪಾಡು ಸಾಧ್ಯವೇ ಎಂದು ಪ್ರಶ್ನಿಸಿದ್ದು ಹೌದು. ಆದರೆ ಅವರು ತೀರ್ಮಾನಿಸಿಯಾಗಿತ್ತು. ಅದನ್ನೇ ತಿಳಿಸಿ ಹೇಳಿದ ಮೇಲೆ 'ಹ್ಞೂಂ' ಎಂದರು.
1991ರಲ್ಲಿ ತುಮಕೂರಿನ ರವೀಂದ್ರ ಕಲಾನಿಕೇತನದಲ್ಲಿ ಡ್ರಾಯಿಂಗ್ ಆ್ಯಂಡ್ ಪೇಂಟಿಂಗ್‌ನ ಡಿಪ್ಲೋಮಾ ಪದವಿ ಪಡೆದರು. ಅಲ್ಲಿಂದ ಆರಂಭವಾಗಿದ್ದೇ ಬಣ್ಣದ ಲೋಕದ ಪಯಣ.
ಹೈಸ್ಕೂಲ್ ಮೇಷ್ಟ್ರುಗಳಿಂದ ಹಿಡಿದು ಕೆ.ಟಿ. ಶಿವಪ್ರಕಾಶ್, ಚಂದ್ರಶೇಖರ್, ಪ.ಸ. ಕುಮಾರ್. ನಟರಾಜ ಬೂದಾಳು ಅವರಂಥ ಹಿರಿಯರು, ಗುರುಗಳು, ಸ್ನೇಹಿತರೆಲ್ಲ ಅವರಿಗೆ ಪ್ರೇರಣೆಯಾದರಂತೆ.
ಇತ್ತೀಚೆಗೆ ಬೆಂಗಳೂರಿನ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಅವರ ಏಕವ್ಯಕ್ತಿ ಪ್ರದರ್ಶನವಿತ್ತು. ಅಲ್ಲಿ ನೆರೆದಿದ್ದವರು ಪೇಂಟಿಂಗ್‌ಗಳನ್ನು ನೋಡಿ ಬೆನ್ನು ತಟ್ಟಿದ್ದನ್ನು ಮರೆಯಲಾರೆ ಎನ್ನುತ್ತಾರೆ. ಕೇರಳ, ಗೋವಾ, ಚೆನ್ನೈ, ಬೆಂಗಳೂರು ಸೇರಿದಂತೆ ಸಿಂಗಾಪುರದಲ್ಲೂ ಏಕವ್ಯಕ್ತಿ ಪ್ರದರ್ಶನಗಳು ನಡೆದಿವೆ. ಅಲ್ಲದೆ ಮುಂಬೈ, ಬೆಂಗಳೂರು, ದೆಹಲಿ, ಸೇರಿದಂತೆ ಸಿಂಗಾಪುರ ಮತ್ತು ಅಮೆರಿಕದಲ್ಲೂ ಪ್ರದರ್ಶನಗಳಾಗಿವೆ. ಸಿಂಗಾಪುರದ ಆರ್.ಟಿ. ಆರ್ಟ್ ಗ್ಯಾಲರಿ ಸೇರಿದಂತೆ ಯುರೋಪ್ ಹಾಗೂ ದೆಹಲಿ ಬೆಂಗಳೂರು, ಮುಂಬೈ ಮತ್ತು ಗೋವಾಗಳಲ್ಲಿ ಪೇಂಟಿಂಗ್‌ಗಳು ಇವೆ ಎಂದು ನೆನಪಿಸಿಕೊಳ್ಳುತ್ತಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ 'ಮಹಾಯಾನ' ಏಕವ್ಯಕ್ತಿ ಪ್ರದರ್ಶನದ ಆಹ್ವಾನ ಪತ್ರಿಕೆಯಲ್ಲಿ  ಮನು ಚಕ್ರವರ್ತಿ ಮತ್ತು ಅವರ ಪೇಂಟಿಂಗ್‌ಗಳ ಬಗ್ಗೆ ನಟರಾಜ ಬೂದಾಳು ಬರೆದಿದ್ದಾರೆ. ಅವರ ಮಾತುಗಳಿವು... ಹೊಸದೊಂದು ಚಿತ್ರವನ್ನು ಏಕೆ ನೋಡಬೇಕು? ಎನ್ನುವ ಪ್ರಶ್ನೆಗೆ ಅನೇಕ ಉತ್ತರಗಳಿವೆ. ಅವುಗಳಲ್ಲಿ 'ನೋಡುವ ಕ್ರಮವನ್ನು ಬದಲಿಸಿಕೊಳ್ಳಲು' ಎನ್ನುವುದೂ ಒಂದು. ಹಾಗೆ ನೋಡಿದಾಗ ಈ ಕೃತಿಗಳು ಮತ್ತು ನೀವು ಭಿನ್ನವೂ ಅಲ್ಲ ವಿಭಿನ್ನೂ ಅಲ್ಲ ಎಂಬ ಅನುಭವವನ್ನು ಕೊಟ್ಟರೆ ಸಾರ್ಥಕ ಎಂದು ಕಲಾವಿದ ನಂಬಿದ್ದಾನೆ.
ಅಂದಹಾಗೆ ನೀವೂ ಮನು ಅವರ ಬಣ್ಣದ ಲೋಕಕ್ಕೆ ಕನಸುಗಳನ್ನು ಬಿತ್ತಿ. ಹಲೋ ಹೇಳಿ- 9886346299.

- ಚನ್ನಮಲ್ಲಿಕಾರ್ಜುನ ಹದಡಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com