ರೇಣುಕಾಚಾರ್ಯ ಸಿನಿಮಾ ಹೀರೋ ಆದರೆ ಹೀರೋಯಿನ್ ಯಾರಾಗಬಹುದು?
ಪೇಂಟರ್ ಪಾಪು, ಸಂತೇಮರಹಳ್ಳಿ
ಹತ್ತು ವರ್ಷದ ಸಂಬಂಧ ಒಂದು ನಿಮಿಷದ ಕೋಪಕ್ಕೆ ಬಲಿಯಾಗುವುದೇಕೆ?
- ಸಂಬಂಧ ಹತ್ತು ವರ್ಷ ಹಳೆಯದು. ಕೋಪ ಹೊಸತು!
ಆರ್. ವಿಜಯಲಕ್ಷ್ಮಿ, ಕೊಳ್ಳೇಗಾಲ.
ದೇವರುಗಳು ಬೆಟ್ಟ-ಗುಡ್ಡಗಳ ಮೇಲೇಕೆ ನೆಲಸಬೇಕು?
- ಮುಂದೆ ರಸ್ತೆ ಅಗಲ ಆಗುತ್ತೆ ಎಂಬ ಮುಂದಾಲೋಚನೆ!
ರವೀಂದ್ರ ಶಿ. ಯಡಹಳ್ಳಿ, ಬೀಳಗಿ
ಗಾಡಿಗೂ ಬಾಡಿಗೂ ವ್ಯತ್ಯಾಸವೇನು?
- ಗಾಡಿಗೆ ಗೇರ್ ಬೇಕು. ಬಾಡಿಗೆ ಏರ್ ಬೇಕು!
ಓಂ ಚನ್ನೇಶ್ ಅರಬಿಳಚಿ ಕ್ಯಾಂಪ್ ಭದ್ರಾವತಿ
ರೇಣುಕಾಚಾರ್ಯ ಸಿನಿಮಾ ಹೀರೋ ಆದರೆ ಹೀರೋಯಿನ್ ಯಾರಾಗಬಹುದು?
- ಯಾರಾದ್ರೂ 'ಬಿಗ್ಬಾಸ್' ಮನೆತನದವರೇ ಆಗಬಹುದು!
ಓಂ ಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ
'ಟೋಪಿ' ಹಾಕೋದು ಅಂದ್ರೆ ಏನೂ ಸಾರ್?
- ಒಂದು ಸಾವಿರ ರುಪಾಯಿ ದುಡ್ಡು ಕಳಿಸಿ. ನಿಮಗೊಬ್ಬರಿಗೇ ಹೇಳ್ತೀನಿ!
ವಿ. ಹೇಮಂತ್ಕುಮಾರ್, ಬೆಂಗಳೂರು.
ಹುಲಿ ಬೇಟೆಗೂ ಹುಡುಗಿ ಬೇಟೆಗೂ ವ್ಯತ್ಯಾಸವೇನು?
- ಹುಲಿ ಬೇಟೆ ಮಾಡಿದ್ರೆ ಪೊಲೀಸ್ ಬಂಧನ. ಹುಡುಗಿ ಭೇಟೆಯಾಡಿದ್ರೆ ಬಾಹು ಬಂಧನ!
ಬಾನಂದೂರು ಮಂಜುಳಾ, ದೇವದುರ್ಗ
ಪುರುಷ ಪ್ರಧಾನ ವಿಧಾನ ಸಭೆಯಲ್ಲಿ ಉಮಾಶ್ರೀ ಮಹಿಳಾ ಧನಿಯಾಗುವರೆ?
- ಅದು 'ಆ್ಯಕ್ಷನ್', 'ಕಟ್' ಹೇಳುವವರ ಮೇಲೆ ನಿರ್ಧಾರವಾಗುತ್ತೆ!
ಸಿ. ಅನಂತರಾಮ್ ಹಿರೇಹಳ್ಳಿ, ಭರಮಸಾಗರ
ಟಿವಿಗೂ ಠೀವಿಗೂ ವ್ಯತ್ಯಾಸವೇನು?
- ಟಿವಿ ನಿಮ್ಮನ್ನು ಕೂರಿಸುತ್ತೆ. ಠೀವಿ ನಿಮ್ಮನ್ನು ಬೆಳೆಸುತ್ತೆ!
-ಘಾಟಿ