ಚಾರಣ

Updated on: 

ತಗ್ಗು ದಿಣ್ಣೆ ಹುಲ್ಲು ಹಾದಿ
ಕಾನ-ನದಿ ಪುಳಕವಾಣಿ!
ಕತ್ತು ಇಳಿಜಾರು. ಉಂಗುರ- ಮೊಲೆತೊಟ್ಟು
ಹೊಕ್ಕಳು- ನವಿರು ರೋಮ;ದಿ
ಗಂಬರ ಯೋನಿ!
ಕಲ್ಲಂಚು ಕುಸಿದು ಉಳುಕೀತು
ಕಾಲು- ಎಡವಿ ಮತ್ತೆಲ್ಲೋ
ತನುವು. ಹಾ! ಮೇಲೆ ನೀಲ ಬಾನು!
ಏನಿದೇನಿದು ಸೋಜಿಗ
ಅಡಿಯೊಳವಳು ಮೇಲೆ ಅವನು!
ಮುಂಜಾವ ಮಂಜು ಹುಲ್ಲು ಅಲಗಿನ ಮೇಲೆ
ಹೊತ್ತೇರೀತು! ಜಾರಿ
ಧರೆಗೆ ಹಸಿರು ಚಿಗುರು
ಅವಳೊಳಗೆ ಅವನು; ತೋಳಬಂದಿ- ಚಂದ
ನಗುವ ಕೂಸು, ಮಡಿಲು ಬೆರಗು
ಕಣಿವೆ ಇಳಿದು ಬೆಟ್ಟವೇರಿ
ಕಲ್ಲೋ ಹುಲ್ಲೋ, ನೋವೆಲ್ಲಿ?
ರೋಮಾಂಚಕ ಮುಳ್ಳುನಖ!
ಶಿಖರ ಮೆಟ್ಟಿದೆ, ನೋಡು;
ಇದೇ ಸ್ವರ್ಗ- ಸುಖ!
ದೂರಬೆಟ್ಟದಿ ದಣಿವು ಆರಿತು; ಮತ್ತೆ
ಕಲ್ಲೂ ಮುಳ್ಳೂ!
ಗಮ್ಯ ಕೆಳಗೆ!
ಬೆಟ್ಟ ಅವಳ ಹಾಗೆ
ಏರುವುದು ಸುಲಭ, ಇಳಿಯುವುದು ಕಷ್ಟ
ದ್ವಂದ್ವ ಒಳಗೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com