ನಾಯಿಗೆ 4 ಕಾಲಿದ್ರೂ, ಕಾಲ್ ಮೇಲೆ ಕಾಲ್ ಹಾಕ್ಕೊಂಡ್ ಕೂರೋದಿಕ್ಕಾಗಲ್ಲ!
ನಾನು ಬಸ್ನಲ್ಲಿ ಹತ್ತಿದ್ರೂ, ಬಸ್ ನನ್ಮೇಲೆ ಹತ್ತಿದ್ರೂ ಟಿಕೆಟ್ ತಗೊಳ್ಳೋನು ನಾನೇ!
ಸೆಲ್ನಲ್ಲಿ ಬ್ಯಾಲೆನ್ಸ್ ಇಲ್ಲ ಅಂದ್ರೆ ಕಾಲ್ ಮಾಡೋದಿಕ್ಕಾಗಲ್ಲ, ಮನುಷ್ಯನಿಗೆ ಕಾಲ್ ಇಲ್ಲ ಅಂದ್ರೆ ಬ್ಯಾಲೆನ್ಸ್ ಮಾಡೋದಿಕ್ಕಾಗಲ್ಲ!
ರೈಲು ಎಷ್ಟೇ ವೇಗವಾಗಿ ಬಂದ್ರೂ ಕೊನೆ ಬೋಗಿ ಬರೋದು ಕೊನೇಗೇನೇ!
ಬಸ್ ಹತ್ತಿ ಹೋದ್ರೂ, ಬಸ್ಸ್ಟ್ಯಾಂಡ್ ಅಲ್ಲೇ ಇರುತ್ತೆ. ಆದರೆ, ಸೈಕಲ್ ಹತ್ತಿ ಹೋದ್ರೆ ಸೈಕಲ್ಸ್ಟ್ಯಾಂಡ್ ಜೊತೆಗೇ ಬರುತ್ತೆ!
-ಶಶಿಕಾಂತ