ಮೂರು ಹಕ್ಕಿ
ಎರಡು ಕಾಳು
ಒಂದು ಬಲೆ
ಎರಡು ಕನಸು
ಒಂದು ನಗ್ನ
ಮತ್ತೊಂದು ಭಗ್ನ
ಮೊದಲ ಹನಿ
ಇಂಗುವುದು
ಪ್ರೇಮ
ನಡುನೀರಿನಲ್ಲಿ
ನಿಂತ ದೋಣಿ
ದಡ ಆಸೆ
ಚೂರಾಗಿಸಬೇಡ
ತೆಗೆದುಕೋ
ಹೃದಯ ಬೇಕಾದರೆ
ಹುಡುಕುತ್ತಿದ್ದಾರೆ
ಅಲ್ಲಿ ಯಾರು?
ಕನ್ನಡಕ ಚೂರು
ಕತ್ತಲ ಮುಂದೆ
ನಿಂತು ಯೋಚನೆ
ಬಂದದ್ದೆಲ್ಲಿಂದ?
ಬಲೆಯಲ್ಲಿ ಮಿಕ
ಹಲ್ಲಿ ಸರಿಯುತ್ತಿದೆ
ನೀನು ಸುಮ್ಮನಿರು
ಚಿಕ್ಕೆಗಳು ರಾತ್ರಿ
ನನ್ನೊಡನೆ ಆಡಿದವು
ಎಂದಿತು ಮಗು
ಹನಿವ ಮಳೆ
ಹೊರಗೆ
ನೆನಪು ಒಳಗೆ
- ಕೇರ