ಆ ಹಳ್ಳಿಯ ದಾರಿಯಲ್ಲಿ ಬರೀ ಹಳ್ಳ ದಿಣ್ಣೆಗಳು. ಆತ ಹೇಗೋ ಕಾರು ನಡೆಸುತ್ತಿದ್ದ. ಆದರೂ ರಸ್ತೆ ಮಧ್ಯದ ದೊಡ್ಡ ಹಳ್ಳಕ್ಕೆ ಕಾರು ಬಿತ್ತು. ಸುತ್ತಮುತ್ತ ಯಾರೂ ಇಲ್ಲ. ಈ ಕತ್ತಲೆಯಲ್ಲಿ ಏನಪ್ಪಾ ಮಾಡುವುದು ಎಂದು ಯೋಚಿಸಿದ ಕಾರಿನ ಯಜಮಾನ. ಅವನ ಅದೃಷ್ಟಕ್ಕೆ ಅಲ್ಲೇ ಹತ್ತಿರದಲ್ಲಿ ಒಂದು ಗುಡಿಸಲು ಕಂಡಿತು. ಅಲ್ಲಿದ್ದ
ಇಬ್ಬರು ಹಳ್ಳಿಗರಿಗೆ ತನ್ನ ಪಾಡು ತಿಳಿಸಿದ. ಅವರಿಬ್ಬರೂ ಮರುಮಾತನಾಡದೆ ಬಂದು ಕಾರು ತಳ್ಳಿದರು. ಕಾರಿನ ಯಜಮಾನನಿಗೆ ಖುಷಿಯಾಗಿ ಕೈತುಂಬಾ ಹಣ ನೀಡಿ ಕೇಳಿದ: ಇಂಥ ಜಾಗದಲ್ಲಿ ಏನು ಕೆಲಸ ನಿಮಗೆ?
ಅವರಲ್ಲೊಬ್ಬ ಹೇಳಿದ: ಅದೇ ಸ್ವಾಮಿ, ಹಳ್ಳ ತೆಗೆದು ನೀರು ತುಂಬ್ಸೋದು!