ದಿನವೆಲ್ಲಾ ಒಂದೇ ಥರ ಇರೋದು ಎಂಥ ಬೋರು ಅಂತ ಅರ್ಥವಾಗಬೇಕಾದರೆ ಮದ್ಯ ಸೇವಿಸದವರನ್ನು ನೋಡಿ.
ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಆತನನ್ನು ಕೆಕ್ಕರಿಸಿ ನೋಡುತ್ತಿರುವ ಮಹಿಳೆಯೊಬ್ಬಳಿರುತ್ತಾಳೆ.
ಬದುಕನ್ನು ಅಷ್ಟೆಲ್ಲ ಸೀರಿಯಸ್ಸಾಗಿ ತಗೋಬೇಡಿ. ನೀವು ಅದರಿಂದ ಬಚಾವಾಗಲು ಸಾಧ್ಯವಿಲ್ಲ.
ಸೂರ್ಯನೇ ಉದಯಿಸದ ದಿನ ಹೇಗಿರುತ್ತೆ? ಇನ್ನು ಹ್ಯಾಗಿರುತ್ತೆ, ರಾತ್ರಿ ಥರ ಅಲ್ದೆ!
ಒಳ್ಳೆ ಹವೆ ಬೇಕಾದ್ರೆ ಸ್ವರ್ಗಕ್ಕೆ ಹೋಗಿ, ಒಳ್ಳೆ ಕಂಪನಿ ಬೇಕಾದ್ರೆ ನರಕಕ್ಕೆ ಹೋಗಿ.
ನಮ್ಮ ಮನೆಯ ಊಟದ ಮೆನುವಿನಲ್ಲಿ ಎರಡೇ ಐಟಂ: ತಿನ್ನು ಇಲ್ಲ ಬಿಡು.
ಎರಡು ಕೆಡುಕುಗಳ ಮಧ್ಯೆ ಆಯ್ಕೆ ಮಾಡಬೇಕಾಗಿ ಬಂದರೆ, ನೀವು ಇದುವರೆಗೆ ಟ್ರೈ ಮಾಡಿಲ್ಲದೆ ಇದ್ದುದನ್ನು ಆಯ್ದಕೊಳ್ಳಿ.
9 ಗ್ರಹಗಳು, 204 ದೇಶಗಳು, 809 ದ್ವೀಪಗಳು, 7 ಸಮುದ್ರಗಳು, 800 ಕೋಟಿ ಜನಸಂಖ್ಯೆ ಇಷ್ಟಿದ್ಮೇಲೂ ಅವನು ಯಾಕೆ ಫೇಸ್ಬುಕ್ನಲ್ಲಿ 'ಸಿಂಗಲ್' ಅಂತ ಹಾಕ್ಕೊಂಡಿದ್ದಾನೆ?