

ಕುವೆಂಪು ಗೀತೆಗಳೆಂದರೆ ಕ್ರಾಂತಿಕಾರಿ, ಸೃಜನಶೀಲ ಎನ್ನುವ ಅಭಿಪ್ರಾಯವಿದೆ. ಅವರ ಹಲವಾರು ಕವಿತೆಗಳಲ್ಲಿ ಆಧ್ಯಾತ್ಮಿಕ ಭಾವವೂ ಇದೆ. ನಿತ್ಯವೂ ಅವತರಿಸು, ಸತ್ಯಾವತಾರ, ಆನಂದಮಯ... ಹೀಗೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ನಟರಾಜ ಉತ್ಸವದಲ್ಲಿ ಭಾನುವಾರ ಸಂಜೆ ಸೃಷ್ಟಿ ತಂಡದ ನಿರ್ದೇಶಕ, ಕಲಾ ವಿಮರ್ಶಕ ಡಾ.ಎ.ವಿ. ಸತ್ಯನಾರಾಯಣ ಅವರು ಕುವೆಂಪು ಅವರ ಅಂಥ ಗೀತೆಗಳಿಗೆ ಕಥಕ್ನಲ್ಲಿ ಹೆಜ್ಜೆ ಹಾಕಲಿದ್ದಾರೆ.
ಸ್ಥಳ: ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ಸಮಯ: ಸಂಜೆ 4.