ಸೌಮ್ಯಶ್ರೀ, ದೇವದುರ್ಗ
ನಿವೃತ್ತಿ ಬೆನ್ನಲ್ಲೇ ತೆಂಡೂಲ್ಕರ್‌ಗೆ ವಿದೇಶಿ ಮಾಧ್ಯಮಗಳ ಭರ್ಜರಿ ಹೊಗಳಿಕೆಯಂತೆ?
-ಅವರ ಪರ ಮುಂದೆ ಬ್ಯಾಟಿಂಗ್ ಮಾಡಲಿ ಅಂತ!
ಪಿ.ಜೆ. ರಾಘವೇಂದ್ರ, ಮೈಸೂರು
ಎಲ್ಲರೂ ಪಲ್ಲಕ್ಕಿಯಲ್ಲಿ ಕೂರಲು ಬಯಸಿದರೆ ಪಲ್ಲಕ್ಕಿ ಹೊರುವವರಾರು?
-'ಅನ್‌ಲಕ್ಕಿ' ಆದವರು!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ದೇವೇಗೌಡರಿಗೆ ತುಂಬ ಸಿಟ್ಟು ಬಂದಾಗ ಏನು ಮಾಡಬಹುದು?
-ತೃತೀಯ ರಂಗ ಕಟ್ತೀನಿ ಅಂತ ಪಂಚೆ ಎತ್ತಿಕಟ್ಟುತ್ತಾರೆ!
ನಂದ, ಯಡಿಯೂರು
sorry ಗೂ sareeಗೂ ವ್ಯತ್ಯಾಸವೇನು?
-sorryಬಾಯಿಂದ ಬರುತ್ತೆ. saree ಮಿಲ್‌ನಿಂದ ಬರುತ್ತೆ.
- ಘಾಟಿ