ಮೇಷ್ಟ್ರು: ಭಾರತದಲ್ಲಿ ಪ್ರತಿ ದಿನ 5 ಸೆಕೆಂಡ್ಗೆ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡುತ್ತಾಳೆ.
ಗುಂಡಾ: ಹೌದಾ ಸಾರ್, ಹಾಗಾದ್ರೆ ನಾವು ಆದಷ್ಟು ಬೇಗ ಆ ಮಹಿಳೆ ಯಾರೆಂದು ಕಂಡುಹಿಡಿಯಬೇಕು ಸಾರ್ ಎಂದ.
=
ಗುಂಡಾ: ಸುದೀರ್ಫ ಕಾಲ ಬದುಕ ಬೇಕಾದರೆ ಏನು ಮಾಡಬೇಕು?
ಡಾಕ್ಟರ್: ಬೇಗ ಮದುವೆ ಮಾಡಿಕೊ.
ಗುಂಡಾ: ಅದರಿಂದ ಹೇಗೆ ಸಾಧ್ಯ ಡಾಕ್ಟ್ರೇ?
ಡಾಕ್ಟರ್: ಹಾಗಲ್ಲ... ನೀನು ಮದುವೆ ಮಾಡಿಕೊಂಡ್ರೆ ನಂತರ ನಿನಗ್ಯಾವತ್ತೂ ಸುದೀರ್ಫ ಜೀವನ ನಡೆಸಬೇಕಂತ ಅನ್ನಿಸೋದೇ ಇಲ್ಲ...!
=
ಗುಂಡಾ: ನಾನು ನಿನ್ನನ್ನು ಮದುವೆ ಆಗಲು ಸಾಧ್ಯವೇ ಇಲ್ಲ. ಮನೆಯಲ್ಲಿ ಯಾರೂ ಇದಕ್ಕೆ ಒಪ್ಪುತ್ತಿಲ್ಲ.
ಪ್ರೇಯಸಿ: ನಮ್ಮ ಪ್ರೀತಿಯನ್ನು ತಡೆಯುತ್ತಿರೋರು ಯಾರು?
ಗುಂಡಾ : ನನ್ನ ಹೆಂಡತಿ ಹಾಗೂ ಇಬ್ಬರು ಮಕ್ಕಳು.