ಬೆಂಗಳೂರಿನ ಹನುಮಂತನಗರದ ಕೆ.ಎಚ್. ಕಲಾಸೌಧದಲ್ಲಿ ಇಂದು ಸಂಜೆ 6.30ಕ್ಕೆ ಯಕ್ಷಗಾನವನ್ನು ಆಸ್ವಾದಿಸುವರಿಗೆ ಒಂದು ಉತ್ತಮ ಅವಕಾಶ. ಸರ್ವಸ್ವ ಅರ್ಪಿಸುವ, 'ಯಕ್ಷ ಸಿಂಚನ' ತಂಡ ಪ್ರದರ್ಶಿಸುವ ಯಕ್ಷಗಾನ ಪ್ರಸಂಗ 'ರತ್ನಾವತಿ ಕಲ್ಯಾಣ' ನಡೆಯಲಿದೆ. ಕವಿ ಮುದ್ದಣ ಬರೆದಿರುವ ಕಥೆಯನ್ನು ಇಲ್ಲಿ ವಿಶೇಷವಾಗಿ ಬಳಸಿಕೊಳ್ಳಲಾಗಿದೆ. ಕೀರ್ತನ ಒಡ್ಡೋಲಗ, ಬಣ್ಣದ ಒಡ್ಡೋಲಗ ಮತ್ತು ಯುದ್ಧ ನೃತ್ಯಗಳು ಕಲಾರಸಿಕರನ್ನು ರಂಜಿಸಲಿವೆ. ಕೃಷ್ಣಮೂರ್ತಿ ತುಂಗ ನಿರ್ದೇಶಿಸಿದ್ದಾರೆ. ಆಸಕ್ತರು ಸಂಪರ್ಕಿಸಿ ಮೊ. 9986474787.
Advertisement