ಟಿವಿ ಮಾಧ್ಯಮ

Updated on

ಈಗಾಗಲೆ 'ರೇಡಿಯೋ ಧ್ವನಿ' ಕೃತಿಯ ಮೂಲಕ ಮಾಧ್ಯಮ ಪಾಠವನ್ನು ಆರಂಭಿಸಿರುವ ಡಾ. ನಾಗೇಂದ್ರ ಅವರು ಇದೀಗ 'ಟಿವಿ ಮಾಧ್ಯಮ' ಕೃತಿಯ ಮೂಲಕ ಟೆಲಿವಿಷನ್ ಕ್ಷೇತ್ರದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಟಿವಿ ಚಾನೆಲ್‌ಗಳು, ಖಾಸಗಿ ಮತ್ತು ಸರ್ಕಾರಿ ಚಾನೆಲ್‌ಗಳ ಆದ್ಯತೆಗಳು, ಕಾರ್ಯಕ್ರಮಗಳ ನಿರೂಪಣೆ, ಕಾರ್ಯಕ್ರಮ ನಿರೂಪಕನಾಗಲು ಬೇಕಾದ ಅರ್ಹತೆಗಳೇನು, ಟಿವಿ ಕಾರ್ಯಕ್ರಮ ಪ್ರಸಾರಕ್ಕೆ ಧ್ವನಿ, ಟಿವಿ ಭಾಷೆ ಹೀಗೆ ಪ್ರಸಾರಕ್ಕೆ ಬೇಕಾದ ಅಗತ್ಯ ಅಂಶಗಳ ಬಗ್ಗೆ ಮಾಹಿತಿಯನ್ನು ಮೊದಲೆರಡು ಅಧ್ಯಾಯಗಳಲ್ಲಿ ನೀಡಿದ್ದಾರೆ. ಟಿವಿಯಲ್ಲಿ ಪ್ರಸಾರವಾಗುವ ಮತ್ತು ಪ್ರಸಾರ ಮಾಡಬಹುದಾದ ಕಾರ್ಯಕ್ರಮಗಳ ಮಾದರಿಯನ್ನು ಅವರು ನೀಡಿದ್ದಾರೆ. ಟಿವಿಯಲ್ಲಿ ಬುಲೆಟಿನ್ ಸಿದ್ಧಪಡಿಸುವುದು ಹೇಗೆ, ವಹಿಸಬೇಕಾದ ಎಚ್ಚರಿಕೆಗಳೇನು ಎಂಬುದನ್ನೂ ಅವರು ಹೇಳಿದ್ದಾರೆ. ಪಾರಿಭಾಷಿಕ ಪದಕೋಶ ನೀಡಿದ್ದಾರೆ. ವಿದ್ಯುನ್ಮಾನ ಮಾಧ್ಯಮದಲ್ಲಿ ಕೆಲಸ ನಿರ್ವಹಿಸಬೇಕು ಎನ್ನುವವರಿಗೆ ಇದೊಂದು ಉತ್ತಮವಾದ ಅಭ್ಯಾಸ ಗ್ರಂಥವಾಗಿದೆ.

ಕೃತಿ: ಟಿವಿ ಮಾಧ್ಯಮ
ಪ್ರಕಾರ: ಪರಿಚಯ
ಏಕೆ ಓದಬೇಕು?: ಜ್ಞಾನಕ್ಕೆ
ಪ್ರ: ಶ್ರೀಚನ್ನಕೇಶವ ಪ್ರಕಾಶನ, ತುಮಕೂರು,
ಪುಟಗಳು 174, ಬೆಲೆ ರು. 140


- ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com