
ಜಪಾನಿನಲ್ಲಿ ಬಾಳೆಹಣ್ಣು ತಿನ್ನೋರೇ ಕಮ್ಮಿ ಆಗಿದ್ದಾರಂತೆ. ಹೀಗಾಗಿ, ಅಲ್ಲಿನ ರೈತರು ತಮ್ಮ ಬೆಳೆಗೆ ವಿಶಿಷ್ಟವಾಗಿ ಮಾರುಕಟ್ಟೆ ಸೃಷ್ಟಿಸಿಕೊಳ್ಳುತ್ತಿದ್ದಾರೆ. ಅದರ ಫಲಶ್ರುತಿಯೇ 'ಬನಾನಾ ಟ್ಯಾಟೂ'. ಬಾಳೇಹಣ್ಣಿನ ಮೇಲೆ ಜಗತ್ತಿನ ವಿಶಿಷ್ಟತೆಗಳ ಚಿತ್ರ ಬಿಡಿಸಿ ಮಾರುಕಟ್ಟೆಯಲ್ಲಿಡಲಾಗುತ್ತಿದೆ. ಅಂದಹಾಗೆ, ರೈತ ವ್ಯಾಪಾರಿಗಳಿಗೆ ಈ ಐಡಿಯಾ ಹೇಳಿಕೊಟ್ಟಿದ್ದು ಯುವ ಕಲಾವಿದ ಎಂಡ್ ಕೇಪ್ ಎಂಬ ಹುಡುಗ. ಭಾರತದಲ್ಲೂ ಬಾಳೆಹಣ್ಣಿನ ರೇಟು ಡೌನಾದರೆ ಈ ನೀತಿ ಅನುಸರಿಸಬಹುದು. ಅಂಥ ಟೈಮು ಬಂದಾಗ ರೈತರು ಇದನ್ನು ನೆನಪಿಸಬಹುದು!
Advertisement