ಒಂದೇಟು

Updated on: 

ಅವನು ನಕ್ಕ. ಅವಳೂ ನಕ್ಕಳು. ಮಗು ಅತ್ತಿತ್ತು.
    ಟೈಟ್ ಬಟ್ಟೆ ಹಾಕಿದ್ರೆ ರಕ್ತಸಂಚಲನ ಆಗೋದಿಲ್ಲ ಅನ್ನೋದು ಸುಳ್ಳು. ಹುಡ್ಗೀರು ಟೈಟ್ ಬಟ್ಟೆ ಹಾಕಿದ್ರೆ, ಹುಡುಗರಲ್ಲಿ ಸಂಚಲನ ಆಗುತ್ತೆ.
    'ಸೌಂಡ್‌' ಎನ್ನುವುದು ಕೆಲವೊಮ್ಮೆ ನಮ್ಮ ವೈಯಕ್ತಿಕ ಸಮಸ್ಯೆಯೂ ಆಗಿರುತ್ತದೆ.
    ಸುಡುವ ಕಾಫಿಯನ್ನು ನೇರವಾಗಿ ಕುಡಿಯಬೇಡಿ. ಕಪ್‌ನಲ್ಲಿ ಹಾಕಿ ಕುಡಿಯಿರಿ.

ಜೋಕ್ಸ್‌ಪಿಯರ್

ಫಂಟಾ: ನಿನ್ಹತ್ರ ಮೊಬೈಲ್ ಇದ್ರೂ ಯಾಕೆ ನನ್ಗೆ ಲೆಟರ್ ಬರೆದೆ.
ಕೋಲ್ಯ: ಇಲ್ಲಾ ನಾನು ಮೊದ್ಲು ಮೊಬೈಲಲ್ಲೇ ಟ್ರೈ ಮಾಡಿದೆ. ಆದ್ರೆ ಅದು 'Plz try Letter' ಅಂತ ಹೇಳ್ತು.
=
ಕೋಲ್ಯ: ನನ್ನ ಹೆಂಡ್ತಿ ಸ್ನಾನ ಮಾಡೋದಿಕ್ಕೆ ಸಿಕ್ಕಾಪಟ್ಟೆ ಹೆದರ್ತಾಳೆ.
ಫಂಟಾ: ಅದ್ಹೇಗೆ ಹೇಳ್ತೀಯ?
ಕೋಲ್ಯ: ಸ್ನಾನಕ್ಕೆ ಹೋಗುವಾಗ್ಲೆಲ್ಲ ಅವಳು ಬಾತ್‌ರೂಮ್ ಒಳಗೆ ಸೆಕ್ಯುರಿಟಿ ಗಾರ್ಡನ್ನು ಕರ್ಕೊಂಡ್ ಹೋಗ್ತಾಳೆ.
=
ಯಾವ ಲೈಟು?
ಮೈನಿಂಗ್ ಕಂಪನಿಯ ಸಂದರ್ಶನ...
ಸಂದರ್ಶಕ: ಎಷ್ಟು ಅಡಿ ಆಳದಲ್ಲಿ ಕೆಲಸ ಮಾಡಿದ ಅನುಭವವಿದೆ?
ಫಂಟಾ: 8- 10 ಅಡಿ.
ಸಂದರ್ಶಕ: ನಾನ್‌ಸೆನ್ಸ್. ಅದೆಂಥ ಗಣಿ? ಗೆಟ್‌ಔಟ್.
ಫಂಟಾನಿಗೆ ಬೇಸರವಾಗಲಿಲ್ಲ. ಈ ಕೆಲಸ ತನ್ನ ಸ್ನೇಹಿತನಿಗಾದರೂ ಸಿಗಲಿ ಎಂದು ಒಳಗೆ ಕೇಳಿದ ಪ್ರಶ್ನೆಯನ್ನೂ, ತಾನು ಹೇಳಿದ ಉತ್ತರವನ್ನೂ ಹೊರಗೆ ಕೂತಿದ್ದ ಕೋಲ್ಯನಿಗೆ ಹೇಳಿದ. ಅಲ್ಲದೆ, ಗಣಿಯ ಆಳ ಇನ್ನೂ ಸ್ವಲ್ಪ ಜಾಸ್ತಿಯೇ ಹೇಳು ಅಂತಲೂ ಹೇಳಿದ.
ಕೋಲ್ಯನ ಸರದಿ ಬಂತು.
ಸಂದರ್ಶಕ: ಎಷ್ಟು ಅಡಿ ಆಳದ ಗಣಿಯಲ್ಲಿ ಕೆಲಸ ಮಾಡಿದ್ದೀರಿ?
ಕೋಲ್ಯ: 20 ಸಾವಿರ ಅಡಿ.
ಸಂದರ್ಶಕ: ವ್ಹಾವ್! ನಮಗೆ ಇಂಥ ಕಾರ್ಮಿಕರು ಬೇಕು. ಅದ್ಸರಿ ಅಷ್ಟು ಅಡಿ ಆಳದಲ್ಲಿ ಯಾವ ಲೈಟುಗಳನ್ನು ಯೂಸ್ ಮಾಡ್ತಿದ್ರಿ?
ಕೋಲ್ಯ: ಛೇ, ಛೇ... ನನ್ಗೆ ಲೈಟ್ ಯೂಸ್ ಮಾಡುವ ಅಗತ್ಯನೇ ಇರ್ತಿರ್ಲಿಲ್ಲ. ನಾನ್ ಡೇ ಶಿಫ್ಟ್‌ನಲ್ಲಿ ಕೆಲ್ಸ ಮಾಡ್ತಿದ್ದೆ!

ನಿಶ್ಶಬ್ದಕೋಶ

     ಸಮಾಧಿ: ಒಂದು ಶಾಶ್ವತ ಬೆಡ್‌ರೂಂ.
     ಬೀಡಿ: ಸೊಂಟಕ್ಕೆ ಲಾಡಿ ಕಟ್ಟಿಕೊಂಡ ಹೊಗೆಬತ್ತಿ.
     ಕಿಡಿಕಾರು: ಕಾರಿನ ಎಂಜಿನ್ನಿನಲ್ಲಿ ಕಾಣಿಸಿಕೊಳ್ಳುವ ಕಿಡಿ.
     ನಳಪಾಕ: ನಲ್ಲಿ ನೀರಿನಿಂದ ಮಾಡಿದ ಅಡುಗೆ.


ಹರಿದಕೋಟು
ದಡ್ಡರು ಅವರ ತಪ್ಪುಗಳಿಂದ ಪಾಠ ಕಲಿಯುತ್ತಾರೆ. ಬುದ್ಧಿವಂತರು ಇನ್ನೊಬ್ಬರ ತಪ್ಪುಗಳನ್ನು ನೋಡಿ ಪಾಠ ಕಲಿಯುತ್ತಾರೆ.
- ಒಟ್ಟೊ ವನ್ ಬಿಸ್ಮಾರ್ಕ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com