ಗಣೇಶನಿಗೆ ಗೌರಿಮುತ್ತು

ಗಣೇಶನಿಗೆ ಗೌರಿಮುತ್ತು
Updated on: 

ಶ್ರಾವಣ-ಭಾದ್ರಪದ ಮಾಸಗಳು ವರ್ಷಋತುವಿನ ಧಾರೆಯ ದಿನಗಳು. ಭೂತಾಯಿ ಮಳೆಯಿಂದ ಮಿಂದು, ಹಸಿರು ಮಡಿಯುಟ್ಟು ಕಂಗೊಳಿಸುತ್ತಾಳೆ. ಜನಪದರು ಇದನ್ನು ತಾಯಿಗೆ ತವರಿಗೆ ಬರುವ ತವಕವೆಂದು ಕರೆದರು. ತವರಿಗೆ ಬರುವಾಗ ಆಕೆಗೆ ಸಡಗರ ಸಂಭ್ರಮ. ಅನೇಕ ರತ್ನಸಂಪನ್ನೆಯಾದ ಅವಳ ಅಲಂಕಾರಕ್ಕೆ ಸಸ್ಯಲೋಕದಲ್ಲಿ ಹೂಗಳಾದ ಗೌರಿಮುತ್ತು, ಗೌರಿ ಹೂ ಹಾಗೂ ಗಂಗಮ್ಮನ ಹರಳು, ಕರ್ಕಿಜಡ್ಡು ಎಲ್ಲ ಸಿದ್ಧವಾಗುತ್ತವೆ. ಗಿಡಮರ ಬಳ್ಳಿಗಳಲ್ಲೆಲ್ಲ ಭೂತಾಯಿಯ ಅಲಂಕಾರ ಸಾಮಗ್ರಿಗಳೇ ಮೈದಾಳುತ್ತವೆ.
ಗಣೇಶ ಚತುರ್ಥಿಯಂದು ಮಗನ ಉತ್ಸವವೆಂದು ತಾಯಿ ಒಂದು ದಿನ ಮೊದಲೇ ಬಂದು ಮನೆಮನೆಯಲ್ಲಿ ತಂಗುತ್ತಾಳೆ. ಅದೇ ಗೌರೀ ತದಿಗೆ. ಅದಕ್ಕೆ ಅಂದೇ ಫಲವಳಿಗೆ ಕಟ್ಟಿ ಮಂಟಪ ಸಿದ್ಧವಾಗುತ್ತದೆ. ಭೂತಾಯಿಯದೇ ಆದ ಹೂಗಿಡ, ಮರಬಳ್ಳಿಗಳ ಫಲಗಳನ್ನೆಲ್ಲ ತಂದು ನಿವೇದಿಸಲಾಗುತ್ತದೆ.
ಮಲೆನಾಡಿನಲ್ಲಿ ಪ್ರಕೃತಿಯೊಂದಿಗೆ ಹಾಸುಹೊಕ್ಕಾದ ಸಹಜೀವನ ಹಬ್ಬಗಳಲ್ಲೂ ಪ್ರತಿಧ್ವನಿಸುತ್ತದೆ. ಗೌರಿ ಹೂ ಅರಳಿತೆಂದರೆ ಗಣೇಶ ಚೌತಿ ಬಂತೆಂದು ಪುಟ್ಟ ಮಕ್ಕಳೂ ಕೆಲಂಡರ್ ನೋಡದೇ ಗುರುತಿಸಿಬಿಡುತ್ತಾರೆ. ಗೌರೀ ತದಿಗೆಯ ಮುಂಜಾನೆ ಜನ ಗುಡ್ಡಬೆಟ್ಟಗಳಲ್ಲಿ ಅಡ್ಡಾಡಿ ಗೌರಿ ಹೂ, ಗಂಗಮ್ಮನ ಹರಳು, ಗೌರಿಮುತ್ತು, ಕರ್ಕಿಜಡ್ಡು, ವಿಷ್ಣುಪಂತ ಇತ್ಯಾದಿ ಸಸ್ಯ ಹೂಗಳನ್ನು ತಂದು ಸೇರಿಸಿ ಕಟ್ಟಿ, ಮನೆಯೆದುರು ನೇತು ಹಾಕುತ್ತಾರೆ. ಚೌತಿಯಂದು ಗಣೇಶನನ್ನು ಇದಿರುಗೊಂಡು ಪೂಜೆಗೆ ಕರೆದೊಯ್ಯುವಾಗ, ಈ ಹೂಗಳ ಬಳ್ಳಿಗಳ ಕಟ್ಟನ್ನೂ ಒಳಗೊಯ್ದು ಮಂಟಪಕ್ಕೆ ಅಲಂಕಾರ ಕಟ್ಟುತ್ತಾರೆ. ಗೌರೀ ಗಣೇಶ ವಿಸರ್ಜನೆಯ ಸಂದರ್ಭ ಇವನ್ನೂ ವಿಸರ್ಜಿಸುತ್ತಾರೆ.
ಚಿತ್ರ-ಬರಹ: ಗ.ಮ. ತುಂಬೇಮನೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com