

ಪುಟಾಣಿಗಳೆ,
ಈ ವಾರ ಸಖತ್ತಾಗಿರೋ ಒಂದು ಪ್ರಯೋಗ ಮಾಡೋಣ. ಅಮ್ಮ ಹೇಗಿದ್ರೂ ಅಡುಗೆ ಮನೆಯಿಂದ ನಿಮಗೆ ಬೇಕಾದ ಪದಾರ್ಥಗಳನ್ನು ಕೊಡ್ತಾರೆ ಅಲ್ವಾ? ಒಂದು ಚಮಚ ಅಡುಗೆ ಸೋಡಾ, 40 ಮಿ.ಲೀ ನೀರು (ಕಾಲು ಕಪ್‌ಗಿಂತ ಕಡಿಮೆ), ಸ್ವಲ್ಪ ನಿಂಬು ಪೇಯ, ಸಾಫ್ಟ್‌ಡ್ರಿಂಕ್‌ನ ಖಾಲಿ ಬಾಟಲಿ, ಒಂದು ಹೀರುಕೊಳವೆ (ಸ್ಟ್ರಾ), ಒಂದು ಬಲೂನು ಇಷ್ಟಿದ್ದರೆ ಸಾಕು. ನಿಂಬು ಸಿಗದಿದ್ದರೆ ಅದರ ಬದಲಿಗೆ ವಿನೇಗರ್ ಬಳಸಬಹುದು. ಮೊದಲು ಬಲೂನನ್ನು ಊದಿ ಸರಿಯಾಗಿದೆಯೇ ಎಂದು ನೋಡಿಕೊಳ್ಳಿ. ಸಾಫ್ಟ್‌ಡ್ರಿಂಕ್ ಬಾಟಲಿಗೆ ನೀರು ಹಾಕಿ. ಅದಕ್ಕೆ ಬೇಕಿಂಗ್ ಸೋಡಾ ಸೇರಿಸಿ ಕರಗುವವರೆಗೂ ಸ್ಟ್ರಾದಿಂದ ಚೆನ್ನಾಗಿ ಕಲಕಿ. ಈಗ ನಿಂಬು ಪೇಯ ಸುರಿದು ತಕ್ಷಣ ಬಲೂನನ್ನು ಬಾಟಲಿ ಬಾಯಿಗೆ ಕಟ್ಟಿ.
ಏನಾಗುತ್ತದೆ? ಎಲ್ಲವೂ ಸರಿಯಾಗಿದ್ದರೆ ಬಲೂನು ಮೇಲಕ್ಕೆ ಹಾರುತ್ತದೆ. ಇಲ್ಲಿ ಬೇಕಿಂಗ್ ಸೋಡಾ ಮೂಲವಸ್ತು, ನಿಂಬು ಪೇಯ ಆ್ಯಸಿಡ್. ಇವೆರಡರ ಮಧ್ಯೆ ರಾಸಾಯನಿಕ ಪ್ರತಿಕ್ರಿಯೆ ನಡೆದು ಇಂಗಾಲಾಮ್ಲ (ಕಾರ್ಬನ್ ಡೈ ಆಕ್ಸೈಡ್ -ಸಿಓ2) ಉತ್ಪತ್ತಿಯಾಗುತ್ತದೆ. ಅದು ಹೊರಹೋಗಲು ಪ್ರಯತ್ನಿಸುತ್ತದೆ.