ಹೆಜ್ಜೆಯಿಡುತ
ಪುಟ್ಟ ಬಂದ
ಬಂದ ಮೆಲ್ಲಗೆ
ಗಾಂಧಿ ಪಟವ
ಹಿಡಿದು ಹಿಗ್ಗಿ
ಕುಣಿದ ಸಣ್ಣಗೆ
ನಗುವ ಗಾಂಧಿ
ಮುಖಕೆ ತನ್ನ
ಮೂಗು ತಾಗಿಸಿ
ಬೋಳು ತಲೆಗೆ
ಬೆರಳು ತಿವಿದು
ಕಂಡ ಅಚ್ಚರಿ
ಬಿತ್ತು ಅವನ
ನೆದರು ಮತ್ತೆ
ಚಾಳೀಸಿನ ಕಡೆಗೆ
ಕಿತ್ತಲ್ಹೋಗಿ
ಸೋತುಹೋದ
ಬರದು ಕೈಯಿಗೆ
ಬಾಪು ಬಾಪು
ಅಂದರದಕೆ
ಪಾಪು ಪಾಪು ಎನುತಿದೆ
ಬಾಪು ಒಂದೇ
ಪಾಪು ಒಂದೇ
ಕಂದನಾದ ಇವನಿಗೆ
- ಅಕ್ಬರ್ ಸಿ. ಕಾಲಿಮಿರ್ಚಿ