

ಮನುಜ ಬಿಟ್ಟ ಕೆಟ್ಟ ಉಸಿರ
ಎಳೆದು ಕುಡಿವ ಪ್ರತಿ ಮರ
ಬಿಡುತಿಹುದು ಚಿರಕಾಲವು
ಪ್ರಾಣವಾಯು ಕೇಳಿರ
ಅಚ್ಚ ಹಸಿರ ಎಲೆಯ ಮರ
ನಮಗದುವೇ ಚಾಮರ
ಇದಿರಲು ಬಾರದೆಂದೂ
ಕೆಟ್ಟ ಕ್ಷಾಮ ಡಾಬರ
ದಣಿದು ಬಂದ ಮನುಜನಿಗೆ
ತಂಪನಿದು ಕೊಡುವುದು
ಅದಕ್ಕಾಗಿ ನಮ್ಮನದು
ಪ್ರತಿಫಲವ ಕೇಳದು
ಗಿಡದ ಬುಡಕೆ ಕೊಡಲಿ ಏಟು
ಕೊಡುತಿಹರು ನೋಡಿರಿ
ನಾಶ ಮಾಡಲೆಂದು ನೀವು
ಕಾಡ ಕಡಿಯಬೇಡಿರಿ
ಕಾಡಿನುಳಿವೇ ನಾಡಿನುಳಿವು
ಎಂಬ ಸತ್ಯ ಅರಿಯಿರಿ
ಇಂದೇ ನಿಮ್ಮ ಮನೆಯ ಮುಂದೆ
ಗಿಡವನೊಂದ ಹಾಕಿರಿ.
- ಕಿರಣ್ಕುಮಾರ