1. ಒಂದು ಬೆಕ್ಕು ತಿಂಡಿ ತಿನ್ನಲು ಹೋಗಿರುತ್ತೆ. ಇನ್ನೇನು ತಿನ್ನಬೇಕು ಅನ್ನುವಷ್ಟರಲ್ಲಿ ಅಲ್ಲಿಗೆ ಒಂದು ಇಲಿ ಬರುತ್ತೆ. ಆಗ ಬೆಕ್ಕಿನ ಕಣ್ಣು ತಿಂಡಿ ಮೇಲಿರುತ್ತೋ ಅಥವಾ ಇಲಿ ಮೇಲಿರುತ್ತೋ?
2. ನೂರು ರು. ನೋಟಿನಲ್ಲಿ ಗಾಂಧೀಜಿ ಯಾಕೆ ನಗ್ತಿರ್ತಾರೆ?
3. ದಶರಥಸುತಸಖವದನ ಯಾವುದು?
4. ಅಣ್ಣತಮ್ಮಂದಿರು ನಾ ಮುಂದೆ ತಾ ಮುಂದೆ ಅಂತ ಹೋಗ್ತಾರೆ. ಆದ್ರೆ ಇಬ್ರೂ ಒಟ್ಟಿಗೇ ಇರ್ತಾರೆ. ಯಾರು?
5. ನಿಮ್ಮ ಬಳಿ ಒಂದೇ ಒಂದು ಬೆಂಕಿ ಕಡ್ಡಿ ಇದೆ. ಹಾಗೇ ಮೂರು ವಸ್ತುಗಳಿವೆ- ಸೀಮೆಎಣ್ಣೆ ಸ್ಟವ್, ಗ್ಯಾಸ್‌ಸ್ಟವ್ ಮತ್ತು ಮೇಣದ ಬತ್ತಿ. ಯಾವುದನ್ನು ಮೊದಲು ಹಚ್ಚುತ್ತೀರಿ?
6. ಒಬ್ಬ ಹುಡುಗ ಎಣ್ಣೆ ಬಟ್ಟಲು ತರುತ್ತಿದ್ದ. ಅವನದು ತಂಟೆ ಸ್ವಭಾವ. ಎಣ್ಣೆ ಬಟ್ಟಲನ್ನು ಬೋರಲು ಮಾಡಿದ. ಆದರೂ ಎಣ್ಣೆ ಚೆಲ್ಲಲಿಲ್ಲ. ಯಾಕೆ?
ಸಂಗ್ರಹ - ಲಕ್ಷ್ಮಿ ಗಂಗರಾಜು
ಉತ್ತರಗಳು
1. ಬೆಕ್ಕಿನ ಮುಖದ ಮೇಲಿರುತ್ತೆ.
2. ಅತ್ತರೆ ನೋಟು ನೆನೆಯುತ್ತೆ.
3. ಆಂಜನೇಯನ ಮೂತಿ
4. ಎರಡು ಕಾಲುಗಳು
5. ಬೆಂಕಿಕಡ್ಡಿ
6. ಅದರಲ್ಲಿ ಎಣ್ಣೆ ಇರಲಿಲ್ಲ.