ಮಳೆ ಬಂತು ಮಳೆ
ದಬದಬ ಸುರಿಯಿತು ಮಳೆ
ತುಂಬಿ ಹರಿಯಿತು ಹೊಳೆ
ದಪದಪ ಜಡಿಯಿತು ಮಳೆ
ತೊಳೆಯಿತು ಊರ ಕೊಳೆ
ರಪರಪ ಉದುರಿತು ಮಳೆ
ರೈತನ ಮುಖದಲಿ ಕಳೆ
ತಟತಟ ಬಂದಿತು ಮಳೆ
ವಟವಟಗುಟ್ಟಿತು ಕಪ್ಪೆ
ದಡದಡ ಹೊಡೆಯಿತು ಮಳೆ
ಪಚಪಚ ಹರಡಿತು ಕೆಸರು
ಚಿಟಿಚಿಟಿ ಜಿನುಗಿತು ಮಳೆ
ಕಣಜವ ತುಂಬಿತು ಬೆಳೆ
ಪಟಪಟ ಬಂದಿತು ಮಳೆ
ನಾಚಿ ನಿಂತಿತು ಇಳೆ
-
ನಿಮಗೆ ಗೊತ್ತಾ
1. ವಿಶ್ವದ ಅತ್ಯಂತ ಉದ್ದದ ನದಿ- ನೈಲ್
2. ವಿಶ್ವದ ಅತ್ಯಂತ ದೊಡ್ಡ ದೇಶ(ವಿಸ್ತೀರ್ಣದಲ್ಲಿ)- ರಷ್ಯಾ
3. ವಿಶ್ವದ ಅತ್ಯಂತ ದೊಡ್ಡ ಮತ್ತು ಆಳವಾದ ಸಾಗರ- ಫೆಸಿಫಿಕ್ ಸಾಗರ
4. ಭೂಮಿಯ ಮೇಲಿರುವ ಒಟ್ಟು ಸ್ವತಂತ್ರ ದೇಶಗಳ ಸಂಖ್ಯೆ- 196
5. ವಿಶ್ವದ ಚಿಕ್ಕ ಪಕ್ಷಿ- ಹಮ್ಮಿಂಗ್
6. ವಿಶ್ವದ ಅತ್ಯಂತ ದೊಡ್ಡ ಪ್ರಾಣಿ- ವ್ಹೇಲ್
7. ವಿಶ್ವದ ಅತ್ಯಂತ ವೇಗದ ಪ್ರಾಣಿ- ಚಿರತೆ
8. ಅತಿ ಹೆಚ್ಚು ಜನರು ಪಾಲಿಸುವ ಧರ್ಮ- ಕ್ರಿಸ್ಟಿಯನ್
9. ವಿಶ್ವದ ಅತಿ ಎತ್ತರದ ಕಟ್ಟಡ- ಬುರ್ಜ್ ಕಲೀಫಾ, 828 ಮೀ., ದುಬೈ
10. ವಿಶ್ವದ ಅತಿ ಎತ್ತರದ ಜಲಪಾತ- ಏಂಜೆಲ್ ಫಾಲ್ಸ್, ವೆನಿಜುವೆಲ