ಝೆನ್ ಗುರು ಓಮರ್ ಚಾಜಮ್‌ಗೆ ದಾರಿಹೋಕನೊಬ್ಬ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬಯ್ಯುತ್ತಿದ್ದ. ಚಾಜಮ್ ನಕ್ಕನಷ್ಟೆ. ಇದನ್ನು ನೋಡುತ್ತಿದ್ದ ದಾಂಡಿ ಕೇಳಿದ, 'ಇಂಥ ಕೆಟ್ಟ ಮಾತುಗಳನ್ನು ಅದ್ಹೇಗೆ ಸಹಿಸಿಕೊಳ್ಳುವೆ? ತಿರುಗಿ ಬಯ್ಯಬಾರದೇ?' ಚಾಜಮ್ ಮಾತನಾಡದೆ ಅವನನ್ನು ಕರೆದುಕೊಂಡು ಹೋಗಿ ಹರಿದ ಮಾಸಲು ಬಟ್ಟೆಯನ್ನು ಉಡುಗೊರೆ ಎಂದು ನೀಡಿದ. ದಾಂಡಿಗೆ ಸಿಟ್ಟು ಬಂತು. 'ನಾನಿದನ್ನು ಬಳಸಲಾರೆ. ಇದೆಂಥ ಉಡುಗೊರೆ' ಎಂದು ಕುಪಿತನಾದ. ಈಗ ಚಾಜಮ್ ಎಂದ, 'ನಾನೂ ಅಷ್ಟೆ, ಹರಿದ, ಮಾಸಲು ಪದಗಳನ್ನು ಸ್ವೀಕರಿಸುವುದೂ ಇಲ್ಲ, ಅಂದ ಮೇಲೆ ಬಳಸುವುದು ದೂರದ ಮಾತು.'
Advertisement