
ರಜೆಯ ಮಜ ಮುಗಿಯಿತು
ಶಾಲೆ ಶುರು ಆಯಿತು
ಜಿಟಿ ಜಿಟಿ ಮಳೆಯಲಿ ಛತ್ರಿ ಹಿಡಿದು
ಶಾಲೆಗೆ ಹೋಗಲು ಬಲು ಖುಷಿಯು
ಅಮ್ಮನು ಕಟ್ಟಿದ ತಿಂಡಿಯ ಡಬ್ಬಿ ಕೈಯಲಿ ಹಿಡಿದು
ಅಪ್ಪನು ತಂದ ಹೊಸ ಬ್ಯಾಗು ಹೆಗಲಿಗೆ ಹಾಕಿ
ಯುನಿಫಾರ್ಮ್ ಧರಿಸಿ
ಶಾಲೆಗೆ ಹೋಗೋಣ
ನಮ್ಮ ಶಾಲೆಯ ಸುಂದರ
ಇದುವೆ ದೇವರ ಮಂದಿರ
ವಿದ್ಯೆ ನೀಡಿ ಬುದ್ಧಿ ಕೊಡುವ
ಗುರುವೆ ನಮ್ಮಯ ದೇವರು
ಅವರ ಪಾದಕೆ ಶಿರವ ಬಾಗಿಸಿ
ಭಕ್ತಿಯಿಂದಲಿ ನಮಿಸೋಣ
ಪಾಠ ಮುಗಿಸಿ ಆಟ ಆಡಲು
ಮೈದಾನಕ್ಕೆ ಜಿಗಿಯೋಣ
ಶಾಲೆಯ ಕೈ ತೋಟದಲ್ಲಿ
ಹೂವು ಹಣ್ಣನು ಬೆಳೆಸೋಣ
ನಿತ್ಯವು ಹಸಿರು ಕಾಣುವಂತೆ
ದಿನವೂ ನೀರುಣಿಸೋಣ
ಗುರುಗಳು ಕಲಿಸಿದ ಪಾಠವ ಕಲಿತು
ಅಮ್ಮನ ಮಡಿಲ ಸೇರೋಣ
Advertisement