
ಚುಕುಬುಕು ರೈಲನು
ನಡೆಸಿದ ಪುಟ್ಟ
ಇಂಧನ ಇಲ್ಲದೆ
ಕಾಲಲಿ ನಡೆದು
ನಿಲ್ದಾಣವ ಸೇರಿ
ಹಿರಿಹಿರಿ ಹಿಗ್ಗಿದ
ಬಸ್ಸನು ಏರಿ
ಸೀಟಲಿ ಕುಳಿತ
ಪೆಟ್ರೋಲ್ ಇಲ್ಲದೆ
ಬಸ್ಸನು ಚಲಿಸಿದ
ಬಾಯಿಯಿಂದಲೇ
ಸದ್ದನು ಮಾಡಿ
ಸಂತಸ ಹೊಂದಿದ
ಡರ್ ಡರ್ ನಾದದಿ
ಟ್ಯ್ರಾಕ್ಟರ್ ಏರಿದ
ಗೇರು ತೆಗೆಯುತ
ಮುಂದಕೆ ಚಲಿಸಿದ
ಓಡುವ ರಭಸಕೆ
ಕೇಕೆಯ ಹಾಕಿದ
ಬುರ್ ಬುರ್ ಶಬ್ದದಿ
ಲಾರಿಯನೇರಿ
ಹಾರನ್ ಹೊಡೆಯುತ
ಮುಂದಕೆ ನಡೆದು
ಎದುರುಬದುರು
ಗಾಡಿಯ ತಡೆದು
ನಿಲ್ಲದೆ ಓಡಿದ
ಟಕ್ ಟಕ್ ಟರ್ರ್ ಟರ್ಸ್
ಎನ್ನುತಲವನು
ಟ್ರ್ಯಾಕ್ಸಲಿ ಕುಳಿತು
ಗೆಳೆಯರ ಕರೆದು
ಓಣಿಯ ಸುತ್ತಿದ
ಕುದುರೆಯ ಹಿಡಿದು
ಜಟಕಾ ಬಂಡಿಯ
ಮೇಲಕೆ ಏರಿ
ಜನಗಳ ಕೂರಿಸಿ
ಓಡಿಸುತದನು
ಮನೆಮನೆ ತಿರುಗಿ
ಸಂಭ್ರಮ ಪಟ್ಟಿಹನು.
-ಅಕ್ಬರ್ ಸಿ. ಕಾಲಿಮಿರ್ಚಿ
Advertisement