

ಆಕಾಶದಲ್ಲಿ ಹಾರಾಡುತ್ತಿದ್ದ ವಿಮಾನ ಇದ್ದಕ್ಕಿದ್ದಂತೆ ಅಲುಗಾಡತೊಡಗಿತು. ವಿಮಾನದೊಳಗಿದ್ದ ಎಲ್ಲರೂ ಭಯದಿಂದ ಕಿರುಚತೊಡಗಿದರು. ಕೆಲವರು ಪ್ರಾರ್ಥನೆಯಲ್ಲಿ ತೊಡಗಿದರು. ಆದರೆ ಪುಟ್ಟ ಹುಡುಗಿಯೊಬ್ಬಳು ಮಾತ್ರ ಏನೂ ಆಗಿಲ್ಲವೆಂಬಂತೆ ತನ್ನಷ್ಟಕ್ಕೆ ತನ್ನ ಗೊಂಬೆಯೊಂದಿಗೆ ಆಟವಾಡುತ್ತಿದ್ದಳು.
ಸ್ವಲ್ಪ ಸಮಯದ ನಂತರ ವಿಮಾನ ಕಂಟ್ರೋಲಿಗೆ ಬಂದು ನಿಧಾನವಾಗಿ ಭೂಮಿಗಿಳಿಯಿತು. ಎಲ್ಲರೂ ನಿಟ್ಟುಸಿರು ಬಿಟ್ಟರು. ಆಗ ತಾತನೊಬ್ಬ ಆ ಪುಟ್ಟ ಹುಡುಗಿಯನ್ನು ನಿಲ್ಲಿಸಿ ಕೇಳಿದ, 'ಎಲ್ಲರೂ ಅಷ್ಟು ಹೆದರಿರುವಾಗ ನೀನು ಮಾತ್ರ ಆಟವಾಡುತ್ತಿದ್ದೆಯಲ್ಲ, ಭಯವಾಗಲಿಲ್ಲವೇ?'.
ಹುಡುಗಿ ಸಾವಕಾಶವಾಗಿ ಉತ್ತರಿಸಿದಳು, 'ನನ್ನ ಅಪ್ಪನೇ ಪೈಲಟ್. ನನಗೆ ಗೊತ್ತಿತ್ತು, ನನ್ನನ್ನು ಆತ ಸುರಕ್ಷಿತವಾಗಿಡುತ್ತಾನೆ' ಎಂದು!