ಚಿರತೆ ಗಂಟೆಗೆ 76 ಕಿ.ಮೀ. ಓಡುತ್ತದೆ. ಅದು ನಿಜಕ್ಕೂ ವೇಗದ ಓಟ. ಅದೇ ಅತ್ಯಂತ ವೇಗದ ಮನುಷ್ಯನೊಬ್ಬ ಗಂಟೆಗೆ 30 ಕಿ.ಮೀ. ಓಡಬಲ್ಲ. ಚಿರತೆ ಸಿಂಹದಂತೆ ಗರ್ಜಿಸುವುದಿಲ್ಲ. 10 ರಿಂದ 12 ವರ್ಷ ಬದುಕುವ ಚಿರತೆಗಳು ದೊಡ್ಡ ಬೆಕ್ಕು ಎಂದೂ ಗುರುತಿಸಲ್ಪಡುತ್ತವೆ. ಸುಮಾರು 35-65 ಕೆ.ಜಿ. ತೂಗಬಲ್ಲವು. ಎರಡು ಮೀಟರ್‌ನಷ್ಟು ಎತ್ತರ ಬೆಳೆಯುತ್ತವೆ. ಮೂರ್ನಾಲ್ಕು ದಿನಗಳಿಗೊಮ್ಮೆ ಬಾಯಾರಿಕೆ ನೀಗಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಹೆಣ್ಣು ಚಿರತೆ ಮೂರು ಮರಿಗಳಿಗೆ ಜನ್ಮ ನೀಡುತ್ತದೆ. ಮರಿಗಳು ಒಂದೂವರೆಯಿಂದ ಎರಡು ವರ್ಷ ತಾಯಿಯ ಜೊತೆಗಿರುತ್ತವೆ. ಹುಟ್ಟಿದ ಮರಿಗಳು ಮೊದಲ ವರ್ಷದಲ್ಲಿ ಆಟವಾಡುತ್ತ ಬೇಟೆಯಾಡುವ ಕಲೆಯನ್ನು ಕಲಿತುಕೊಳ್ಳುತ್ತವೆ. ಗಂಡು ಚಿರತೆಗಳು ಒಂಟಿಯಾಗಿ ಅಥವಾ ಸಣ್ಣ ಗುಂಪುಗಳಲ್ಲಿ ಬದುಕುತ್ತವೆ.