ಚುಕ್ಕೆ
ಛಮಕು ಛಮಕು ಚುಕ್ಕೆ
ಬಾನಲೇಕೆ ನಕ್ಕೆ?
ಬಾನಿನಿಂದ ಭುವಿಗೆ ಬರಲು
ಏನು ನಿನಗೆ ಧಕ್ಕೆ!
ಛಮಕು ಛಮಕು ಚುಕ್ಕೆ
ನಿನಗೆ ಬಹಳ ಸೊಕ್ಕೆ?
ತಂದೆಯಂಥ ಚಂದ್ರನನ್ನು
ಅಣಕಿಸುತ್ತ ನಕ್ಕೆ!
ಛಮಕು ಛಮಕು ಚುಕ್ಕೆ
ನೀನು ಎನಗೆ ಸಿಕ್ಕೆ!
ಭುಮಿ ಬಯಲು ಸಾಲದೇನು
ನನ್ನ ಕೂಡ ಆಡಲಿಕ್ಕೆ!
ಛಮಕು ಛಮಕು ಚುಕ್ಕೆ
ಬಿಟ್ಟು ಬಾನ ತೆಕ್ಕೆ!
ಧೋ ಎಂದು ಜಾರಿ ಬಾ
ನಮ್ಮಯ ನೆಲಕ್ಕೆ!
ಛಮಕು ಛಮಕು ಚುಕ್ಕೆ
ಹಚ್ಚಿಕೊಂಡು ರೆಕ್ಕೆ!
ಇಳಿದು ಬಾ ಇಲ್ಲಿ
ಕೂಡಿ ಆಡಲಿಕ್ಕೆ!
= ಗುರುರಾಜ ಬೆಣಕಲ್