

ರಜೆ ಬಂತು ರಜೆ
ನನಗೆ ಖುಷಿ ತಂತು
ಅಂಗಳದಲ್ಲಿ ಆಡುವೆ ನಾ
ಕರೆಯುವೆ ಗುಬ್ಬಿಗೆ ನಿಂತು
ಅಮ್ಮ ಅಪ್ಪ ಈಗೆನಗೆ
ಪಾಠ ಓದಿಸುವುದಿಲ್ಲ
ಹೋಂವರ್ಕ್ ಇರುವುದಿಲ್ಲ
ಮಿಸ್ಸೂ ಕೇಳುವುದಿಲ್ಲ
ಶೂಸ್ ಸಾಕ್ಸ್ ಡ್ರೆಸ್ಗಳೀಗ
ಮೈಗೆ ಅಂಟುವುದಿಲ್ಲ
ಕಲ್ಲು, ಮಣ್ಣು, ಮರಗಳೆ
ನನ್ನ ಆಟಿಗೆಗಳಾಗಿವೆಯಲ್ಲ
ಬಾಯಾರಿಕೆ, ಹಸಿವುಗಳು
ಗೊತ್ತೇ ಆಗುವುದಿಲ್ಲ
ಅಮ್ಮ ತುತ್ತು ಬಾಯಲ್ಲಿಟ್ಟರೂ
ಅವು ಪತ್ತೆ ಆಗುವುದೇ ಇಲ್ಲ
ಡೋರೆಮಾನ್, ಚೋಟಾ ಭೀಮ್
ಟಿ.ವಿ ಯ ಶೋಗಳೆಲ್ಲ
ನೋಡಲು ಎನಗೆ ಪರ್ವ
ಅದರಲ್ಲೇ ಮೈಮರೆವೆನಲ್ಲ
ಅಜ್ಜನ ಊರಿಗೆ ಹೋಗಲು
ನಾನು ಕುಣಿವೆನಲ್ಲ
ಎಷ್ಟೇ ಆಟ ಆಡಿದರೂ
ನಾ ಚೂರು ದಣಿಯುವುದಿಲ್ಲ
ಬೇಡುವೆ ದೇವರಿಗೆ ನಾನು
ಬೇಸಿಗೆ ಹೋಗದಿರಲಿ
ಆಡುತ ಹಾಡುತ ನಾನಿರಲಿ
ಸೂಟಿ ಎಂದೂ ಮುಗಿಯದಿರಲಿ
ಆದರೂ ರಜೆ ಮುಗಿಯಿತು
ಶಾಲೆ ಆರಂಭವಾಯಿತು
- ಎಂ. ಜಿ. ದೇಶಪಾಂಡೆ