ನವದೆಹಲಿ: ನಿಮ್ಮ ಗ್ರಾಹಕರನ್ನು ಅರಿಯಿರಿ(ಕೆವೈಸಿ) ನಿಯಮಾವಳಿಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೋಮವಾರ 22 ಬ್ಯಾಂಕ್ಗಳಿಗೆ 50 ಲಕ್ಷದಿಂದ 3 ಕೋಟಿವರೆಗೆ ದಂಡ ವಿಧಿಸಿದೆ. ಆದರೆ, ಕಪ್ಪುಹಣವನ್ನು ಬಿಳಿ ಹಣವನ್ನಾಗಿಸುವ ದಂಧೆಯಲ್ಲಿ ಭಾಗಿಯಾದ ಕುರಿತು ಈ ಬ್ಯಾಂಕ್ಗಳ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ಆರ್ಬಿಐ ಹೇಳಿದೆ. ಹಣಕಾಸು ಅಕ್ರಮಕ್ಕೆ ಸಂಬಂಧಿಸಿ ಕೋಬ್ರಾಪೋಸ್ಟ್ ತನಿಖಾ ವರದಿ ಹಿನ್ನೆಲೆಯಲ್ಲಿ ಆರ್ಬಿಐ ಎಲ್ಲಾ ಬ್ಯಾಂಕ್ಗಳ ದಾಖಲೆಗಳ ಪರಿಶೀಲನೆ ನಡೆಸಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡ, ಕೆನರಾ ಬ್ಯಾಂಕ್, ಐಒಬಿ ಮತ್ತು ಬ್ಯಾಂಕ್ ಆಫ್ ಇಂಡಿಯಾಗೆಗೆ 3 ಕೋಟಿ, ಆಂಧ್ರ ಬ್ಯಾಂಕ್, ಪಂಜಾಬ್ ಆ್ಯಂಡ್ ಸಿಂದ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಲಕ್ಷ್ಮಿ ವಿಲಾಸ್ ಬ್ಯಾಂಕ್ಗೆ 2.5 ಕೋಟಿ ದಂಡ ವಿಧಿಸಿದೆ. ಬರ್ಕ್ಲೇಸ್ ಬ್ಯಾಂಕ್, ಬಿಎನ್ಪಿ ಪರಿಬಸ್, ಸಿಟಿಬ್ಯಾಂಕ್, ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲ್ಯಾಂಡ್ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್ಗೆ ಎಚ್ಚರಿಕೆ ಪತ್ರವನ್ನೂ ಆರ್ಬಿಐ ನೀಡಿದೆ.