ಡೆಂಘೀ: ಇನ್ನೂ ಮೂವರು ಬಲಿ

Updated on: 

ಕೆ.ಆರ್.ಪೇಟೆ/ಬ್ಯಾಡಗಿ/ಗದಗ: ರಾಜ್ಯದ ವಿವಿಧೆಡೆ ಡೆಂಘೀ ಹಾವಳಿ ಮುಂದುವರಿದಿದ್ದು ಭಾನುವಾರ ಮತ್ತೆ ಮೂವರು ಬಲಿಯಾಗಿದ್ದಾರೆ. ಜ್ವರದಿಂದ ಬಳಲುತ್ತಿದ್ದ ಕೆ.ಆರ್. ಪೇಟೆ ತಾಲೂಕಿನ ಕೂಡಲಕುಪ್ಪೆ ಗ್ರಾಮದ ಪಲ್ಲವಿ (4) ಮೈಸೂರಿನ ಚೆಲುವಾಂಬ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ವಾರದಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಬ್ಯಾಡಗಿ ನಿವಾಸಿ ಮೆಹಬೂಬ್ ಅತ್ತಾವುಲ್ಲಾ ಹತ್ತಿವಾಲೆ (8) ಅಸುನೀಗಿದ್ದಾನೆ. ಗದಗ ಜಿಲ್ಲೆ ಬೆಟಗೇರಿಯ ಮಹದೇವಸಾ ಮೇಹರವಾಡೆ (52) ಶಂಕಿತ ಡೆಂಘೀಯಿಂದ ಮೃತಪಟ್ಟಿದ್ದಾನೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಮಹದೇವಸಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com