ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸಿದ ಕೇಜ್ರಿವಾಲ್; ವ್ಯಾಪಕ ಟೀಕೆ

ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಗುರುವಾರ ಬ್ಯುಸಿನೆಸ್ ಕ್ಲಾಸ್‌ನಲ್ಲಿ ದುಬೈಗೆ ಪ್ರಯಾಣಿಸಿದ್ದು...
ಬ್ಯುಸಿನೆಸ್ ಕ್ಲಾಸ್‌ನಲ್ಲಿ ದುಬೈಗೆ ಪ್ರಯಾಣಿಸುತ್ತಿರುವ ಅರವಿಂದ್ ಕೇಜ್ರಿವಾಲ್ (ಕೃಪೆ: ಟ್ವೀಟರ್‌)
ಬ್ಯುಸಿನೆಸ್ ಕ್ಲಾಸ್‌ನಲ್ಲಿ ದುಬೈಗೆ ಪ್ರಯಾಣಿಸುತ್ತಿರುವ ಅರವಿಂದ್ ಕೇಜ್ರಿವಾಲ್ (ಕೃಪೆ: ಟ್ವೀಟರ್‌)

ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಗುರುವಾರ ಬ್ಯುಸಿನೆಸ್ ಕ್ಲಾಸ್‌ನಲ್ಲಿ ದುಬೈಗೆ ಪ್ರಯಾಣಿಸಿದ್ದು, ಇದೀಗ ಟೀಕೆಗೆ ಗುರಿಯಾಗಿದ್ದಾರೆ.

'ಆಮ್ ಆದ್ಮಿ' ಕೇಜ್ರಿವಾಲ್‌ರ ಬ್ಯುಸಿನೆಸ್ ಕ್ಲಾಸ್ ಪಯಣದ ಬಗ್ಗೆ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷ ಟೀಕಾ ಪ್ರಹಾರವನ್ನು ಆರಂಭಿಸಿವೆ.

ಇದಕ್ಕೆ ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷ, ಕೇಜ್ರಿವಾಲ್‌ಗೆ ಬ್ಯುಸಿನೆಸ್ ಕ್ಲಾಸ್ ಟಿಕೆಟ್‌ನ್ನು ಆಯೋಜಕರೇ ನೀಡಿದ್ದರು ಎಂಬ ಸಮಜಾಯಿಷಿ ನೀಡಿದೆ.

ವರ್ಲ್ಡ್ ಬ್ರಾಂಡ್ಸ್ ಸಮ್ಮೇಳನದಲ್ಲಿ ಏಷ್ಯಾದ ಮೋಸ್ಟ್ ಇನ್‌ಸ್ಪೈರಿಂಗ್ ಆ್ಯಂಡ್ ಯಂಗ್ ಸೋಷ್ಯಲ್ ಮೇಕರ್ ಎಂಬ ಪ್ರಶಸ್ತಿಯನ್ನು ಸ್ವೀಕರಿಸಲು ಕೇಜ್ರಿವಾಲ್ ದುಬೈಗೆ ಪಯಣ ಬೆಳಸಿದ್ದಾರೆ. ಅದೇ ವೇಳೆ ಅವರು ದುಬೈನಲ್ಲಿರುವ ಐಸಿಎಐ (ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟ್ಸ್ ಆಫ್ ಇಂಡಿಯಾ)ವನ್ನುದ್ದೇಶಿಸಿ ಮಾತನಾಡಲಿದ್ದಾರೆ.  5 ದಿನಗಳ ಪ್ರವಾಸದಲ್ಲಿರುವ ಕೇಜ್ರಿವಾಲ್ ದುಬೈ ಮತ್ತು ನ್ಯೂಯಾರ್ಕ್ ಸಂದರ್ಶಿಸಲಿದ್ದಾರೆ.

ದೆಹಲಿಯ ಮಾಜಿ ಸಿಎಂ ಆಗಿರುವ ಕೇಜ್ರಿವಾಲ್ ಸಾಧಾರಣ ರೀತಿಯ ಜೀವನ ಶೈಲಿಯನ್ನು ಅಳವಡಿಸಿ ಅದನ್ನು ಪ್ರೋತ್ಸಾಹಿಸುತ್ತಿದ್ದವರು. ಆದರೆ ಇದೀಗ ಆಮ್ ಆದ್ಮಿ ಮುಖಂಡ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣ ಮಾಡಿದ್ದು ಅಚ್ಚರಿಯನ್ನುಂಟು ಮಾಡಿದೆ.

ಆಪ್‌ನ ನಿಜವಾದ ಮುಖ ಈಗ ಬೆಳಕಿಗೆ ಬಂದಿದೆ. ಆಪ್ ಹೇಳುವುದೊಂದು ಮಾಡುವುದೊಂದು. ಒಂದೆಡೆ ಅವರು ಸಾಮಾನ್ಯ ಜನರ ಬಗ್ಗೆ ಮಾತನಾಡುತ್ತಾರೆ, ಆದರೆ ಇನ್ನೊಂದೆಡೆ ಪಕ್ಷದ ಮುಖ್ಯಸ್ಥನೇ ಚಂದಾ ಸಂಗ್ರಹಕ್ಕಾಗಿ ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣ ಮಾಡುತ್ತಾರೆ. ಇದು ಪಕ್ಷದ ಉದ್ದೇಶವೇನೆಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ ಎಂದು ಕಾಂಗ್ರೆಸ್ ವಕ್ತಾರ ಶೋಭಾ ಓಜಾ ಟೀಕಿಸಿದ್ದಾರೆ.

ಆದಾಗ್ಯೂ, ಕೇಜ್ರಿವಾಲ್  ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿರುವ ಫೋಟೋಗಳು ಸೋಷ್ಯಲ್ ನೆಟ್ವರ್ಕ್‌ನಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಚರ್ಚೆ, ಜೋಕ್, ಮೆಮೆ ಹುಟ್ಟಿಕೊಂಡಿವೆ. ಟ್ವೀಟರ್‌ನಲ್ಲಿ  #KhaasAadmi ಎಂಬ ಹ್ಯಾಶ್‌ಟ್ಯಾಗ್ ಮೂಲಕ ಕೇಜ್ರಿವಾಲ್ ಬಗ್ಗೆ  ಟ್ವೀಟ್‌ಗಳು ಸುದ್ದಿಮಾಡುತ್ತಿವೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com