
ಹೈದ್ರಾಬಾದ್: ಬಸ್ಸಿನಲ್ಲಿ ಪ್ರಯಾಣಿಸುವಾಗ ಮಹಿಳೆಯರು ಅನುಭವಿಸುವ ಕಿರುಕುಳ ಅಷ್ಟಿಷ್ಟಲ್ಲ. ಜನರಿಂದ ತುಂಬಿಕೊಂಡಿರುವ ಸಿಟಿ ಬಸ್ಸುಗಳಲ್ಲಿ ಪ್ರಯಾಣ ಮಾಡುವಾಗ ಪುರುಷ ಪ್ರಯಾಣಿಕರ ಕಿರುಕುಳಗಳನ್ನು ಸಹಿಸಿಕೊಂಡು ಹೋಗಬೇಕಾದ ಪರಿಸ್ಥಿತಿ ಎಲ್ಲೆಡೆ ಇದ್ದೇ ಇರುತ್ತದೆ. ಅದಕ್ಕೀಗ ಪರಿಹಾರವೆಂಬಂತೆ ಹೈದ್ರಾಬಾದ್‌ನ ಸಿಟಿ ಬಸ್‌ನಲ್ಲಿ ಮಹಿಳೆ ಮತ್ತು ಪುರುಷರನ್ನು ಪ್ರತ್ಯೇಕಿಸಿ ನಡುವೆ 'ನೆಟ್‌ಡೋರ್'ಗಳನ್ನು ಅಳವಡಿಸಲಾಗಿದೆ.
ಹೈದ್ರಾಬಾದ್ ನಗರದಲ್ಲಿ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ನೆಟ್‌ನಿಂದ ಮಾಡಿದ ಬಾಗಿಲು ಪುರುಷರನ್ನು ಮತ್ತು ಮಹಿಳೆಯರನ್ನು ಪ್ರತ್ಯೇಕಿಸುತ್ತದೆ. ಈ ವ್ಯವಸ್ಥೆಯಿಂದಾಗಿ ಮಹಿಳೆಯರು ಆರಾಮವಾಗಿ ಬಸ್‌ನಲ್ಲಿ ಪ್ರಯಾಣಿಸಬಹುದಾಗಿದೆ.
ಬಸ್‌ನಲ್ಲಿ ಪ್ರಯಾಣಿಸುವಾಗ ಕುಡುಕರು ಬಂದು ಉಪದ್ರ ಮಾಡುವುದು, ಮಹಿಳೆಯರಿಗೆ ಮೀಸಲಿರಿಸಿದ ಸೀಟಿನಲ್ಲಿ ಕುಳಿತುಕೊಳ್ಳುವ ಮೂಲಕ ತೊಂದರೆ ನೀಡಿವುದು ಹೀಗೆ
ಪ್ರಯಾಣ ವೇಳೆ ಪುರುಷರಿಂದಾಗುವ ಸಮಸ್ಯೆಗಳ ಬಗ್ಗೆ ಮಹಿಳಾ ಪ್ರಯಾಣಿಕರು ದೂರು ನೀಡಿದ್ದರು. ಇದನ್ನು ಆಲಿಸಿದ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಮಹಿಳೆಯರ ಸುರಕ್ಷೆಗಾಗಿ ನೆಟ್ ಡೋರ್‌ಗಳನ್ನು ಅಳವಡಿಸಿದೆ.
ತಮ್ಮ ಹೊಸ ಪ್ರಯತ್ನದ ಬಗ್ಗೆ ಮಹಿಳಾ ಪ್ರಯಾಣಿಕರು ಖುಷಿ ವ್ಯಕ್ತಪಡಿಸಿದ್ದು ಇನ್ಮುಂದೆ ಆರ್ಡಿನರಿ ಸಿಟಿ ಬಸ್‌ಗಳಲ್ಲಿ ಕೂಡಾ ಇಂಥದ್ದೇ ಸೌಲಭ್ಯವನ್ನು ಕಲ್ಪಿಸುವುದರ ಬಗ್ಗೆ ನಾವು ಯೋಚನೆ ಮಾಡುತ್ತಿದ್ದೇವೆ ಎಂದು ಆರ್‌ಟಿಸಿ ವೈಸ್ ಚೇರ್‌ಮೆನ್ ಜೆ ಪೂರ್ಣ ಚಂದ್ರ ರಾವ್ ಹೇಳಿದ್ದಾರೆ.
Advertisement