ನೂತನ ಸಿ ಬಿ ಐ ನಿರ್ದೇಶಕರಿಗೆ ೨ಜಿ ಮೊಕದ್ದಮೆಯನ್ನು ಕೈಗೆತ್ತಿಕೊಳ್ಳಲು ಅನುಮತಿ

ಹೊಸದಾಗಿ ನೇಮಕಗೊಂಡಿರುವ ಸಿ ಬಿ ಐ ನಿರ್ದೇಶಕ ಅನಿಲ್ ಸಿನ್ಹಾ ಅವರಿಗೆ ೨ಜಿ ಮೊಕದ್ದಮೆಯ ತನಿಖೆಯನ್ನು...
೨ಜಿ ಹಗರಣದ ಪ್ರಮುಖ ಆರೋಪಿ, ಮಾಜಿ ಕೆಂದ್ರ ಸಚಿವ ರಾಜಾ
೨ಜಿ ಹಗರಣದ ಪ್ರಮುಖ ಆರೋಪಿ, ಮಾಜಿ ಕೆಂದ್ರ ಸಚಿವ ರಾಜಾ

ನವದೆಹಲಿ: ಹೊಸದಾಗಿ ನೇಮಕಗೊಂಡಿರುವ ಸಿ ಬಿ ಐ ನಿರ್ದೇಶಕ ಅನಿಲ್ ಸಿನ್ಹಾ ಅವರಿಗೆ ೨ಜಿ ಮೊಕದ್ದಮೆಯ ತನಿಖೆಯನ್ನು ತಮ್ಮ ಸುಪರ್ದಿಗೆ ಪಡೆಯಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ಈ ಹಿಂದೆ ಕೋರ್ಟ್ ನೀಡಿದ್ದ ಆದೇಶದ ಪ್ರಕಾರ ೨ಜಿ ಹಗರಣದ ಮೊಕದ್ದಮೆಯ ತನಿಖೆಯಿಂದ ಮಾಜಿ ಸಿ ಬಿ ಐ ನಿರ್ದೇಶಕ ರಂಜಿತ್ ಸಿನ್ಹಾ ಅವರನ್ನು ವಜಾ ಮಾಡುವಂತೆ ತಿಳಿಸಿತ್ತು. ಈ ನಿಟ್ಟಿನಲ್ಲಿ ನೂತನ ನಿರ್ದೇಶಕರು ನೇಮಕಗೊಂಡ ಮೇಲೆ ಸಿ ಬಿ ಐ, ಕೋರ್ಟ್ ನ ಸ್ಪಷ್ಟೀಕರಣ ಕೋರಿದ್ದ ಹಿನ್ನಲೆಯಲ್ಲಿ ಕೋರ್ಟ್ ಹೊಸ ಆದೇಶ ನೀಡಿದೆ.

ಡಿಸೆಂಬರ್ ೨ ರಂದು ನ್ಯಾಯಾಲಯ ರಂಜಿತ್ ಸಿನ್ಹಾ ಅವರಿಗೆ ೨ಜಿ ಮೊಕದ್ದಮೆಯ ತನಿಖೆ ಮತ್ತು ಕಾನೂನು ಕ್ರಮದಿಂದ ದೂರ ಉಳಿಯುವಂತೆ ಸೂಚಿಸಿತ್ತು. ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರ ಕೋರಿಕೆ ಮೇರೆ ಸುಪ್ರೀಮ್ ಕೋರ್ಟ್ ಈ ಆದೇಶ ನೀಡಿತ್ತು.

೨ಜಿ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಅಪಾದಿಸಲಾಗಿರುವವರನ್ನು ಹಲವಾರು ಬಾರಿ ರಂಜಿತ್ ಸಿನ್ಹಾ ಭೇಟಿ ಮಾಡಿ, ಅವರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಾಂತ್ ಭೂಷಣ್ ನ್ಯಾಯಾಲಯಕ್ಕೆ ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com