ಅರಬಿಂದೊ ಆಶ್ರಮದಿಂದ ಹೊರಕ್ಕೆ: ಪುದುಚೆರಿಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ ಕುಟುಂಬ, ೩ ಸಾವು

ಪುದುಚೆರಿಯ ಅರಬಿಂದೊ ಆಶ್ರಮದಿಂದ ಹೊರಗೆ ಕಳಿಸಿದ ಒಂದು ದಿನದ ನಂತರ ಇಡಿ ಕುಟುಂಬದ
ಪುದುಚೆರಿಯ ಅರಬಿಂದೊ ಆಶ್ರಮ
ಪುದುಚೆರಿಯ ಅರಬಿಂದೊ ಆಶ್ರಮ

ಪುದುಚೆರಿ: ಪುದುಚೆರಿಯ ಅರಬಿಂದೊ ಆಶ್ರಮದಿಂದ ಹೊರಗೆ ಕಳಿಸಿದ ಒಂದು ದಿನದ ನಂತರ ಇಡಿ ಕುಟುಂಬದ ೫ ಸಹೋದರಿಯರು ಮತ್ತು ಅವರ ಪೋಷಕರು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಅವರಲ್ಲಿ ಇಬ್ಬರು ಸಹೋದರಿಯರು ಮತ್ತು ತಾಯಿ ಮೃತಗೊಂಡಿದ್ದು, ಉಳಿದ ಮೂವರು ಸಹೋದರಿಯರು ಮತ್ತು ತಂದೆಯನ್ನು ಅಲ್ಲಿನ ಬೆಸ್ತರು ರಕ್ಷಿಸಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಿಹಾರದ ಕುಟುಂಬ ಅರಬಿಂದೊ ಆಶ್ರಮದಲ್ಲಿ ಹಲವಾರು ವರ್ಷಗಳಿಂದ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ಆಶ್ರಮವನ್ನು ನಡೆಸುವ ಟ್ರಸ್ಟ್, ೧೦ ವರ್ಷದ ಹಿಂದೆ ಒಬ್ಬಳು ಸಹೋದರಿಯ ಕೆಟ್ಟ ನಡವಳಿಕೆಯನ್ನು ದೂರಿತ್ತು. ಟ್ರಸ್ಟ್ ನ ಪರವಾಗಿ ತೀರ್ಪು ಕೊಟ್ಟಿದ್ದ ಸುಪ್ರೀಂ ಕೋರ್ಟ್, ಎಲ್ಲ ಸಹೋದರಿಯರಿಗೂ ಕೊಠಡಿಯನ್ನು ತೆರವು ಮಾಡುವಂತೆ ಸೂಚನೆ ನೀಡಿತ್ತು, ನಿರಾಕರಿಸಿದ್ದಲ್ಲಿ, ಪೊಲೀಸರು ಅವರನ್ನು ಅಲ್ಲಿಂದ ಹೊರಹಾಕಬೇಕು ಎಂದು ಹೇಳಿತ್ತು.

ಅವರನ್ನು ಹೊರದೂಡಿದರೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಹೋದರಿಯರು ನಿನ್ನೆ ಬೆದರಿಕೆ ಹಾಕಿದ್ದರು. ಅದರಲ್ಲಿ ಒಬ್ಬಳು ಸಹೋದರಿ, ನೀರಿನ ಟ್ಯಾಂಕ್ ಹತ್ತಿ, ಕೆಳಗೆ ಬಿದ್ದು ಸಾಯುವುದಾಗಿ ಬೆದರಿಸಿದ್ದಳು, ಆದರೆ ನಂತರ ಅವಳ ಮನ ಒಲಿಸಲಾಗಿತ್ತು. ಹಲವಾರು ಸುತ್ತಿನ ಮಾತುಕತೆಯ ನಂತರ ಪೊಲೇಸರು, ಆ ಸಹೋದರಿಯನ್ನು ಕೊಠಡಿಯಿಂದ ತೆರವುಗೊಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com