
ಹೈದ್ರಾಬಾದ್: ಮುಂದಿನ ವರ್ಷ ಬಿಟ್ಸ್ (BITS ) ಪಿಲಾನಿ ಹೈದ್ರಾಬಾದ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ. ಎಲ್ಲ ಕೋರ್ಸ್‌ಗಳಿಗೂ ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಿರುವ ಬಿಟ್ಸ್, ಸೀಟುಗಳ ಸಂಖ್ಯೆ 50ಕ್ಕೆ ನಿಗದಿಪಡಿಸಿದೆ.
ಅದೇ ವೇಳೆ ಗೋವಾದಲ್ಲಿರುವ ಬಿಟ್ಸ್‌ನಲ್ಲಿಯೂ ವಿದೇಶಿ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಈ ಅವಕಾಶ ನಾನ್- ಇಂಡಿಯನ್ ಪಾಸ್‌ಪೋರ್ಟ್ (ಭಾರತಿಯೇತರ ಪಾಸ್‌ಪೋರ್ಟ್) ಹೊಂದಿರುವ ವಿದ್ಯಾರ್ಥಿಗಳಿಗಷ್ಟೇ ಎಂದು ಬಿಟ್ಸ್ ಪಿಲಾನಿ ಹೈದ್ರಾಬಾದ್‌ನ ನಿರ್ದೇಶಕ ವಿ.ಎಸ್. ರಾವ್ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಬಿಟ್ಸ್ ತಮ್ಮ ಕ್ಯಾಂಪಸ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿದೆ.
ಬಿಟ್ಸ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಮೂಲಕ ಭಾರತೀಯ ವಿದ್ಯಾರ್ಥಿಗಳ ಕಲಿಕಾ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ. ಇಲ್ಲಿ ವಿದೇಶಿ ವಿದ್ಯಾರ್ಥಿ ಹಾಗೂ ಶಿಕ್ಷಕರ ಉಪಸ್ಥಿತಿಯಿಂದಾಗಿ ಬಿಟ್ಸ್ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವಂತಾಗುತ್ತದೆ. ನಾವಿಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಲಿಕಾ ವ್ಯವಸ್ಥೆಯನ್ನು ನೀಡುತ್ತಿದ್ದೇವೆ ಎಂದು ಫ್ರೊ. ರಾವ್ ಹೇಳಿದ್ದಾರೆ.
Advertisement