ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದ ಕೇರಳದ ಸಾಮಾಜಿಕ ಕಾರ್ಯಕರ್ತ

ಕೇರಳದ ತಲವ್ಡಿಯಲ್ಲಿ ಕುಷ್ಠರೋಗಿಗಳಿಗೆ ಸಹಾಯ ಮಾಡುತ್ತಾ, ಅವರ ಏಳಿಗೆಗೆ ದುಡಿಯುತ್ತಿದ್ದ ಸಾಮಾಜಿಕ ಕಾರ್ಯಕರ್ತ ಜಾನ್ಸನ್ ವಿ ಇಡಿಕುಲ...
ಇಂಡಿಯಾ ಬುಕ್ ಆಫ್ ರೆಕಾರ್ಡ್‌
ಇಂಡಿಯಾ ಬುಕ್ ಆಫ್ ರೆಕಾರ್ಡ್‌
ತಿರುವನಂತಪುರಂ: ಕೇರಳದ ತಲವ್ಡಿಯಲ್ಲಿ ಕುಷ್ಠರೋಗಿಗಳಿಗೆ ಸಹಾಯ ಮಾಡುತ್ತಾ, ಅವರ ಏಳಿಗೆಗೆ ದುಡಿಯುತ್ತಿದ್ದ ಸಾಮಾಜಿಕ ಕಾರ್ಯಕರ್ತ ಜಾನ್ಸನ್ ವಿ ಇಡಿಕುಲ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಕುಷ್ಠರೋಗಕ್ಕೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಉತ್ತಮ ಸಾಮಾಜಿಕ ಕಾರ್ಯಗಳನ್ನು ಜಾನ್ಸನ್ ಮಾಡುತ್ತಿದ್ದಾರೆ. 2003ರಿಂದ ಇಲ್ಲಿಯವರೆಗೆ ಕ್ರಿಸ್ಮಸ್ ಆಚರಣೆಯ ವೇಳೆಗೆ ಅತೀ ಹೆಚ್ಚು ಸಾಮಾಜಿಕ ಕಾರ್ಯಕ್ರಮಗಳನ್ನು ಜಾನ್ಸನ್ ಕೈಗೊಳ್ಳುತ್ತಿದ್ದಾರೆ ಎಂದು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೇಳಲಾಗಿದೆ.
ಕಳೆದ 12 ವರ್ಷಗಳಿಂದ ಆಲಪ್ಪುಳ ಜಿಲ್ಲೆಯ ನೂರನಾಡ್‌ನಲ್ಲಿ ಸಮಾಜಸೇವೆಯಲ್ಲಿ ತೊಡಗಿರುವ ಜಾನ್ಸನ್ ಅವರ ಕಾರ್ಯ ನಿಷ್ಠತೆಯನ್ನು ಪರಿಗಣಿಸಿ ಈ ಗೌರವವನ್ನು ನೀಡಲಾಗಿದೆ ಎಂದು ಇಂಡಿಯಾ ಬುಕ್ ಆಫ್ ರೆಕಾರ್ಡ್‌ನ ಮೂಲಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com