
ನವದೆಹಲಿ: ಮತಾಂತರವನ್ನು ವಿರೋಧಿಸುವವರು ಅದನ್ನು ನಿಷೇಧಿಸಲು ಕಾನೂನು ತರಲಿ ಎಂದು ರಾಷ್ಟ್ರೀಯ ಸ್ವಯಂ ಸೇವಕ್ ಸಂಘ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ.
ಮತಾಂತರ ವಿವಾದಗಳ ಬಗ್ಗೆ ಶನಿವಾರ ಮಾತನಾಡಿದ ಭಾಗ್ವತ್, ಮತಾಂತರವನ್ನು ವಿರೋಧಿಸುವವರು ಸಂಸತ್‌ನಲ್ಲಿ ಮತಾಂತರ ನಿಷೇಧದ ಕಾನೂನು ಜಾರಿ ಮಾಡಲಿ ಎಂದಿದ್ದಾರೆ.
ಇನ್ನೊಂದು ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರವಾಗುವುದನ್ನು ವಿರೋಧಿಸುವ ಮಂದಿ ಮೊದಲು ಹಿಂದೂಗಳನ್ನು ಇತರ ಧರ್ಮಕ್ಕೆ ಮತಾಂತರ ಮಾಡುವುದನ್ನು ತಡೆಯಲಿ. ನೀವು ಅನ್ಯ ಧರ್ಮೀಯರನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡುವುದು ಬೇಡ ಎನ್ನುವುದಾದರೆ, ಇತರ ಧರ್ಮದವರೂ ಹಿಂದೂಗಳನ್ನು ಅವರ ಧರ್ಮಕ್ಕೆ ಮತಾಂತರಿಸಬಾರದು. ಆದಾಗ್ಯೂ, ಹಿಂದೂಗಳು ಬೇರೆ ಯಾವುದೇ ಧರ್ಮಕ್ಕೆ ಮತಾಂತರಗೊಂಡಿದ್ದರೆ ನಾವು ಅವರನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆತರುತ್ತೇವೆ ಎಂದು ಭಾಗ್ವತ್ ಒತ್ತಿ ಹೇಳಿದ್ದಾರೆ.
ಸದ್ಯ ಹಿಂದೂ ಸಮಾಜ ಎಚ್ಚೆತ್ತುಕೊಂಡಿದ್ದು ನಾವ್ಯಾರಿಗೂ ಹೆದರುವ ಅವಶ್ಯಕತೆ ಇಲ್ಲ. ನಾವು ಭಾರತಕ್ಕೆ ಎಲ್ಲಿಂದಲೋ ಬಂದವರಲ್ಲ, ಇದು ಹಿಂದೂಗಳ ದೇಶ ಎಂದು ಭಾಗ್ವತ್ ಗುಡುಗಿದ್ದಾರೆ.
Advertisement