ಗೋಡ್ಸೆ ಚಲನಚಿತ್ರ ಜ.30ಕ್ಕೆ ಬಿಡುಗಡೆ

ದೇಶಾದ್ಯಂತ ನಾಥೂರಾಮ್ ಗೋಡ್ಸೆ ಅವರ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ ನಂತರ...
ಗಾಂಧಿ ಮತ್ತು ಗೋಡ್ಸೆ
ಗಾಂಧಿ ಮತ್ತು ಗೋಡ್ಸೆ
ಮುಂಬೈ: ದೇಶಾದ್ಯಂತ ನಾಥೂರಾಮ್ ಗೋಡ್ಸೆ ಅವರ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ ನಂತರ, ಅಖಿಲ ಭಾರತೀಯ ಹಿಂದೂ
ಮಹಾಸಭಾ ಈಗ ಮಹಾತ್ಮಾಗಾಂಧಿ ಹತ್ಯೆಯ ಬಗ್ಗೆಯಿರುವ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.
ಮೂಲಗಳ ಪ್ರಕಾರ ಹಿಂದೂ ಮಹಾಸಭೆ ದೇಶ್ ಭಕ್ತ್ ನಾಥೂರಾಮ್ ಗೋಡ್ಸೆ  ಎಂಬ ಚಲನಚಿತ್ರವನ್ನು ಜನವರಿ 30 ರಂದು ಬಿಡುಗಡೆ ಮಾಡಲು ನಿರ್ಧರಿಸಿದೆ. 1948, ಜನವರಿ 30ರಂದು ಗೋಡ್ಸೆ ಗಾಂಧಿಯನ್ನು ಗುಂಡಿಕ್ಕಿ ಹತ್ಯೆಗೈದಿದ್ದನು. ಅದೇ ದಿನ ಚಿತ್ರ ಬಿಡುಗಡೆ ಮಾಡಲು ಮಹಾಸಭಾ ತೀರ್ಮಾನಿಸಿರುವುದಾಗಿ ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಮುನ್ನಾ ಕುಮಾರ್ ಶರ್ಮಾ ಹೇಳಿದ್ದಾರೆ.
ಗೋಡ್ಸೆ ಬಗ್ಗೆ ತಯಾರಾಗುತ್ತಿರುವ ಡಾಕ್ಯುಮೆಂಟರಿ ಸಿನಿಮಾದಲ್ಲಿ ಗೋಡ್ಸೆ ದೇಶಕ್ಕಾಗಿ ಏನೆಲ್ಲ ಮಾಡಿದರು ಹಾಗು ಭಾರತದಲ್ಲಿ ಗಾಂಧಿ ಹಿಂದೂಗಳ ವಿರುದ್ಧ ಹೇಗೆ ಕೆಲಸ ಮಾಡುತ್ತಿದ್ದರು ಎಂಬುದನ್ನು ಚಿತ್ರಿಸಲಾಗಿದೆ ಎಂದು ಶರ್ಮಾ ಹೇಳಿದ್ದಾರೆ.
ದೇಶದಲ್ಲಿ ಕಾಂಗ್ರೆಸ್ ಆಳ್ವಿಕೆಯಿದ್ದ ಕಾರಣ ಗೋಡ್ಸೆಯನ್ನು ತಪ್ಪಿತಸ್ಥ ಎಂದು ಮಾಧ್ಯಮಗಳು ಬಿಂಬಿಸಿದವು. ಆದರೆ ಈಗ ನಮ್ಮಲ್ಲಿ ನರೇಂದ್ರ ಮೋದಿಯವರ ಆಳ್ವಿಕೆ ಇದೆ.  ಗೋಡ್ಸೆ.ಯನ್ನು ನಕಾರಾತ್ಮವಾಗಿ ಬಿಂಬಿಸಿದ್ದನ್ನು ಸರಿಮಾಡಲು ಇದೊಳ್ಳೆ ಸಮಯ ಎಂದಿದ್ದಾರೆ ಶರ್ಮಾ.
ಪ್ರಸ್ತುತ ಸಿನಿಮಾದ ಉದ್ದೇಶವೇನು? ಎಂದು ಕೇಳಿದಾಗ, ಮುಂದಿನ ಜನಾಂಗಕ್ಕೆ ಗೋಡ್ಸೆ ದೇಶಕ್ಕಾಗಿ ಮಾಡಿದ ಕೆಲಸಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ಶರ್ಮಾ ಉತ್ತರಿಸಿದ್ದಾರೆ. 
ವಾರಗಳ ಹಿಂದೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಗೋಡ್ಸೆಗೆ ಬಹುಪರಾಕ್ ಹೇಳುವ ಕಾರ್ಯಕ್ರಮಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com