ಗುಜರಾತ್‌ನಲ್ಲಿ ಮತಾಂತರ; ವ್ಯಾಪಕ ಟೀಕೆ

ಗುಜರಾತ್‌ನ ವಲ್ಸದ್‌ನಲ್ಲಿ ಹಿಂದೂ ಸಂಘಟನೆಗಳು ಸಾಮೂಹಿಕ ಮತಾಂತರ ಮಾಡಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ...
ವಿಶ್ವ ಹಿಂದೂ ಪರಿಷತ್  (ಸಾಂದರ್ಭಿಕ ಚಿತ್ರ )
ವಿಶ್ವ ಹಿಂದೂ ಪರಿಷತ್ (ಸಾಂದರ್ಭಿಕ ಚಿತ್ರ )
Updated on

ನವದೆಹಲಿ: ಗುಜರಾತ್‌ನ ವಲ್ಸದ್‌ನಲ್ಲಿ ಹಿಂದೂ ಸಂಘಟನೆಗಳು ಸಾಮೂಹಿಕ ಮತಾಂತರ ಮಾಡಿರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಹಿಂದೂ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ  ಅಲ್ಪ ಸಂಖ್ಯಾತರನ್ನು ಹಿಂದೂ ಧರ್ಮಕ್ಕೆ  ಬಲವಂತವಾಗಿ ಮತಾಂತರ ಮಾಡಿದೆ ಎಂದು ಆರೋಪವೆದ್ದಿದೆ.

ಈ ಬಗ್ಗೆ ಟ್ವೀಟ್ ಮಾಡಿದ ಹಿರಿಯ  ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ವಿಶ್ವ ಹಿಂದೂ ಪರಿಷತ್/ ಆರೆಸ್ಸೆಸ್ಸ್ ಹಿಂದುತ್ವ ಸಾರುವ ಮೂಲಕ ಚರಿತ್ರೆ ಮತ್ತು ಆರ್ಥಿಕ ಕಾಯ್ದೆಗಳನ್ನು ಮರು ರಚನೆ ಮಾಡುತ್ತಿದೆ ಎಂದಿದ್ದಾರೆ.

ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಯಾವುದೇ ವ್ಯಕ್ತಿ ಸ್ವಯಂ ಆಸಕ್ತಿಯಿಂದ ಇನ್ನೊಂದು ಧರ್ಮಕ್ಕೆ ಮತಾಂತರವಾಗುವುದನ್ನು ನಾವು ಸ್ವೀಕರಿಸುವುದಿಲ್ಲ ಎಂದು ಗುಜರಾತ್ ಮೂಲದ ಪಾದ್ರಿ ಫಾದರ್ ಡೊಮಿನಿಕ್ ಹೇಳಿದ್ದಾರೆ.

ಅಹ್ಮದಾಬಾದ್‌ನಿಂದ 350 ಕಿಮಿ ದೂರದಲ್ಲಿರುವ ಬುಡುಕಟ್ಟು ಜನಾಂಗದ ಗ್ರಾಮವೊಂದರ 100ರಷ್ಟು ಕ್ರೈಸ್ತ ಮತೀಯರನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡಲಾಗಿತ್ತು. ಇದೀಗ ವಿವಾದಕ್ಕೀಡಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಸರ್ಕಾರ ಇದರಲ್ಲಿ ನಮ್ಮ ಪಾತ್ರ ಇಲ್ಲ ಎಂದು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com