ರಾಜಸ್ತಾನದ 16 ಸಚಿವರಿಗೆ ಬೆದರಿಕೆ ಇಮೇಲ್

ರಾಜಸ್ತಾನದ 16 ಸಚಿವರಿಗೆ 2015 ಜನವರಿ 26 , ಗಣರಾಜ್ಯೋತ್ಸವ ದಿನದಂದು ರಾಜ್ಯದಲ್ಲಿ ಭಯೋತ್ಪಾದನಾ ದಾಳಿ ನಡೆಸಲಾಗುವುದೆಂದು...
ರಾಜಸ್ತಾನದ ಪೊಲೀಸರು (ಸಾಂದರ್ಭಿಕ ಚಿತ್ರ)
ರಾಜಸ್ತಾನದ ಪೊಲೀಸರು (ಸಾಂದರ್ಭಿಕ ಚಿತ್ರ)

ಜೈಪುರ: ರಾಜಸ್ತಾನದ 16 ಸಚಿವರಿಗೆ 2015 ಜನವರಿ 26 , ಗಣರಾಜ್ಯೋತ್ಸವ ದಿನದಂದು ರಾಜ್ಯದಲ್ಲಿ ಭಯೋತ್ಪಾದನಾ ದಾಳಿ ನಡೆಸಲಾಗುವುದೆಂದು ಬೆದರಿಕೆಯ ಇಮೇಲ್ ಬಂದಿರುವ ಬಗ್ಗೆ ವರದಿಯಾಗಿದೆ.

ಸಚಿವರ ಅಧಿಕೃತ ಇಮೇಲ್ ಐಡಿಗಳಿಗೆ ಈ ಬೆದರಿಕೆ ಬಂದಿದೆ.

ಬೆದರಿಕೆ ಸಂದೇಶದಿಂದಾಗಿ ರಾಜಸ್ಥಾನದಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಸಂದೇಶವನ್ನು ಎಲ್ಲಿಂದ ಕಳುಹಿಸಿದ್ದಾರೆ ಮತ್ತು ಯಾರು ಕಳುಹಿಸಿದ್ದಾರೆ ಎಂಬುದರ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ರಾಜಸ್ತಾನದ ಪೊಲೀಸ್ ಮುಖ್ಯಸ್ಥ ಉಪೇಂದ್ರ ಭಾರದ್ವಾಜ್ ಹೇಳಿದ್ದಾರೆ.

ಲಿಯೋನಾಜಾರ್ದ ಎಂಬ ಇಮೇಲ್ ಐಡಿಯಿಂದ ಈ  ಬೆದರಿಕೆ ಸಂದೇಶ ಬಂದಿದೆ. ನಾವು ಇಂಡಿಯನ್ ಮುದಾಹಿದ್ದೀನ್ ನಿಂದ ಸಂದೇಶ ಕಳುಹಿಸುತ್ತಿರುವುದು. ನಿಮಗೆ ನಾವು ಬಿಗ್ ಬ್ಯಾಂಗ್ ಸಪ್ರೈಸ್ ಕೊಡಲು ಸಿದ್ಧರಾಗಿದ್ದೇವೆ. ನೀವು ರೆಡಿಯಾಗಿರಿ. ನಾವು ಜನವರಿ 26ಕ್ಕಂ ರಾಜಸ್ತಾನದಲ್ಲಿ ಹಲವಾರು ಸ್ಫೋಟಗಳನ್ನು ಮಾಡಲು ಪ್ಲಾನ್  ಮಾಡಿದ್ದೇನೆ ಎಂದು ಇಮೇಲ್ ನಲ್ಲಿ ಬರೆಯಲಾಗಿದೆ.

10 ಕ್ಯಾಬಿನೆಟ್ ಸಚಿವರು ಮತ್ತು 6 ಸಚಿವರ ಇಮೇಲ್ ಐಡಿಗಳಿಗೆ ಈ ಬೆದರಿಕೆ ಸಂದೇಶ ಬಂದಿದೆ. ಆದಾಗ್ಯೂ, ಬೆದರಿಕೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಗಿ ಭದ್ರತೆ ಕಲ್ಪಿಸಿದ್ದು, ಜನರು ಭಯಪಡುವ ಅಗತ್ಯವಿಲ್ಲ ಎಂದು ರಾಜಸ್ತಾನದ ಗೃಹ ಸಚಿವ ಗುಲಾಬ್ ಚಂದ್ ಕತಾರಿಯಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com